
Mangaluru: ಚೀನಾ ದೇಶದ ನಾವಿಕ ಅರಬ್ಬಿ ಸಮುದ್ರದಲ್ಲಿ ನಾಪತ್ತೆ!
6/05/2022 07:16:00 AM
ಮಂಗಳೂರು: ಹಡಗೊಂದರಲ್ಲಿ ವೃತ್ತಿ ನಿರ್ವಹಿಸುತ್ತಿದ್ದ ನಾವಿಕನೊಬ್ಬ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿರುವ ಬಗ್ಗೆ ನಗರದ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚೀನಾ ದೇಶದ ಪ್ರಜೆ ಕ್ಷು ಜುನ್ ಫೆಂಗ್ (52) ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾದ ನಾವಿಕ.
ಮಂಗಳೂರು ನಗರದ ಸುರತ್ಕಲ್ನಿಂದ ಸುಮಾರು 280 ನಾಟಿಕಲ್ ಮೈಲ್ ದೂರದಲ್ಲಿ ಈ ಚೀನಾ ದೇಶದ ಪ್ರಜೆ ನಾಪತ್ತೆಯಾಗಿದ್ದಾರೆ. ಈತ ಮೇ 10 ರಂದು ಅರಬ್ಬಿ ಸಮುದ್ರದಲ್ಲಿ ಪನಾಮಾ ದೇಶದ ಹಡಗಿನಲ್ಲಿ ನಸುಕಿನ ಜಾವ 1.30ರ ಸುಮಾರಿಗೆ ನಾಪತ್ತೆಯಾಗಿದ್ದರು. ಇದೀಗ ಇಂಡಿಯನ್ ಕೋಸ್ಟ್ ಗಾರ್ಡ್ ಡೆಪ್ಯೂಟಿ ಕಮಾಂಡೆಂಟ್ ಭುವನೇಶ್ ಕುಮಾರ್ ಅವರು ಕರಾವಳಿ ಕಾವಲು ಪೊಲೀಸ್ ಠಾಣೆಗೆ ಫ್ಯಾಕ್ಸ್ ಸಂದೇಶದ ಮೂಲಕ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.