-->

Kadaba:-ಕುಕ್ಕೆ ಸುಬ್ರಮಣ್ಯ ಸಮೀಪ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರು.. ಇಬ್ಬರು ಮೃತ್ಯು..!

Kadaba:-ಕುಕ್ಕೆ ಸುಬ್ರಮಣ್ಯ ಸಮೀಪ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರು.. ಇಬ್ಬರು ಮೃತ್ಯು..!

ಸುಬ್ರಮಣ್ಯ

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡ್ಯ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿ ಸೋಮವಾರ ಬೆಂಗಳೂರು ಮೂಲದ ಹುಂಡೈ ಐ ೨೦ ಕಾರೊಂದು ಕಿರು ಸೇತುವೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಬೆಂಗಳೂರಿನ ರಾಮನಗರ ನಿವಾಸಿಗಳಾಗಿರುವ ನಾಗೇಶ್(೩೨) ಹಾಗೂ ತೇಜು ಯಾನೇ ತೇಜಸ್ವಿನಿ (೧೪) ಎಂದು ಮೃತಪಟ್ಟವರು. ಕಾರಿನಲ್ಲಿದ್ದ ಚಾಲಕ ರವಿ(೩೦), ರಜನಿ(೨೪), ರಂಜಿತ್ (೨೪), ಅಚಿಂತ್ಯಾ(೬) ಹಾಗೂ ಒಂದು ಸಣ್ಣ ಮಗುವಿಗೆ ಗಾಯಗಳಾಗಿವೆ. ಇವರೆಲ್ಲಾ ಒಂದೇ ಕುಟುಂಬದವರಾಗಿದ್ದು,

ಒಟ್ಟು ಏಳು ಜನ ಕಾರಿನಲ್ಲಿ ರಾಮನಗರದಿಂದ ಸುಬ್ರಹ್ಮಣ್ಯಕ್ಕೆ ದೇವರ ದರ್ಶನಕ್ಕೆ ಬಂದಿದ್ದರು. ಚಾಲಕನ ನಿಯಂತ್ರಣ ತಪ್ಪಿ

ಕಿರುಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ
ಕಾರು ನಜ್ಜುಗುಜ್ಜಾಗಿದೆ, ಅಪಘಾತದಲ್ಲಿ ಓರ್ವ
ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ
ಗಾಯಗೊಂಡಿದ್ದರು. ಗಂಭೀರ ಗಾಯವಾಗಿದ್ದವರನ್ನು
ಪುತ್ತೂರು ಖಾಸಗಿ ಆಸ್ಪತ್ರೆಗ ಸಾಗಿಸಲಾಗಿತ್ತದರೂ
ಒಬ್ಬರು ಪುತ್ತೂರಿನಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಡಬ ಪೋಲಿಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article