-->
1000938341
ಮಂಗಳೂರಿನ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್‌ಗೆ ರಾಷ್ಟ್ರೀಯ ಗೌರವ: ಕೇಂದ್ರ ಸಚಿವರಿಂದ ಸನ್ಮಾನ

ಮಂಗಳೂರಿನ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್‌ಗೆ ರಾಷ್ಟ್ರೀಯ ಗೌರವ: ಕೇಂದ್ರ ಸಚಿವರಿಂದ ಸನ್ಮಾನ

ಮಂಗಳೂರಿನ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್‌ಗೆ ರಾಷ್ಟ್ರೀಯ ಗೌರವ: ಕೇಂದ್ರ ಸಚಿವರಿಂದ ಸನ್ಮಾನ





ನವದೆಹಲಿಯಲ್ಲಿ ಕೇಂದ್ರದ ಸಚಿವರು ಗಳಿಂದ ಸನ್ಮಾನ ಸ್ವೀಕರಿಸಿದ ನೂರು ವರ್ಷಗಳನ್ನು ಪೂರೈಸಿದ ಸೌತ್ ಕೆನರಾ ಗವರ್ಮೆಂಟ್ ಆಫೀಸರ್ಸ್ ಆಪರೇಟಿವ್ ಬ್ಯಾಂಕ್, ಮಂಗಳೂರು


100 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ ಮಂಗಳೂರಿನ ಡೊಂಗರಕೇರಿ ಯಲ್ಲಿರುವ ಸೌತ್ ಕೆನರಾ ಗವರ್ಮೆಂಟ್ ಆಫೀಸರ್ಸ್ ಆಪರೇಟಿವ್ ಬ್ಯಾಂಕ್‌ಗೆ ಪ್ರತಿಷ್ಠಿತ ರಾಷ್ಟ್ರೀಯ ಗೌರವ ದೊರೆತಿದೆ. ಕೇಂದ್ರ ಸಚಿವರುಗಳ ಸಮ್ಮುಖದಲ್ಲಿ ಬ್ಯಾಂಕ್‌ ಅಧ್ಯಕ್ಷರನ್ನು ಸನ್ಮಾನಿಸುವ ಮೂಲಕ ಕೇಂದ್ರ ಸರ್ಕಾರವು ಬ್ಯಾಂಕ್‌ನ ಸೇವಾ ಕಾರ್ಯವನ್ನು ಪುರಸ್ಕರಿಸಿದೆ.


ಪಟ್ಟಣ ಸಹಕಾರ ಬ್ಯಾಂಕುಗಳ ರಾಷ್ಟ್ರೀಯ ಮಹಾಮಂಡಲದ ವತಿಯಿಂದ ಜೂನ್ 23ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಗೌರವ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.


ಮಂಗಳೂರಿನ ಡೊಂಗರಕೇರಿ ಯಲ್ಲಿರುವ ಸೌತ್ ಕೆನರಾ ಗವರ್ಮೆಂಟ್ ಆಫೀಸರ್ಸ್ ಆಪರೇಟಿವ್ ಬ್ಯಾಂಕ್ ನ್ನು ಪ್ರತಿನಿಧಿಸಿದ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಅವರನ್ನು ಕೇಂದ್ರದ ವಿತ್ತ ಸಹಾಯಕ ಸಚಿವರಾದ ಡಾ. ಭಗವತ್ ಕೆ. ಕರಾಡ್ ಮತ್ತು ಕೇಂದ್ರದ ಸಹಕಾರ ರಾಜ್ಯ ಸಚಿವರಾದ ಶ್ರೀ ಬಿ ಎಲ್‌ ವರ್ಮ ಅವರು ಸನ್ಮಾನಿಸಿದರು.





ಸಮಾರಂಭವನ್ನು ಕೇಂದ್ರದ ಗೃಹ ಹಾಗೂ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಪೂರ್ವಾಹ್ನ ಉದ್ಘಾಟಿಸಿದರು. ಸಹಕಾರಿ ಬ್ಯಾಂಕ್ ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸ್ವತಃ ಸಹಕಾರಿಯಾಗಿರುವ ತನಗೆ ಅರಿವಿದೆ. ಬ್ಯಾಂಕಿಂಗ್ ರೆಗುಲೇಶನ್ ಆಕ್ಟ್ ನ ತಿದ್ದುಪಡಿಯಿಂದಾಗಿ ಸಹಕಾರಿ ಬ್ಯಾಂಕುಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದು ಅವರು ತಿಳಿಸಿದರು.


ಸಹಕಾರಿ ಬ್ಯಾಂಕುಗಳು ದೇಶದ ಪ್ರಗತಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದ್ದು ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಸಹಕಾರಿ ಬ್ಯಾಂಕುಗಳ ಕೊಡುಗೆ ಮಹತ್ತರವಾದದ್ದು ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.


ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಅವರ ಜೊತೆಗೆ ನಿರ್ದೇಶಕರುಗಳಾದ ಶ್ರೀ ಪ್ರದೀಪ್ ಡಿ ಸೋಜಾ ಮತ್ತು ಶ್ರೀ ಶಮಂತ್ ಕುಮಾರ್ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article