-->
1000938341
ಕಾಸರಗೋಡು: ಸಂಚರಿಸುತ್ತಿದ್ದ ಲಾರಿ ಬೆಂಕಿಗಾಹುತಿ

ಕಾಸರಗೋಡು: ಸಂಚರಿಸುತ್ತಿದ್ದ ಲಾರಿ ಬೆಂಕಿಗಾಹುತಿ

ಕಾಸರಗೋಡು: ಸಂಚರಿಸುತ್ತಿದ್ದ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಅಗ್ನಿಗಾಹುತಿಯಾಗಿರುವ ಘಟನೆ ಇಂದು ಮಧ್ಯಾಹ್ನ ಪೆರ್ಲ ಸಮೀಪದ ನಲ್ಕ ಎಂಬಲ್ಲಿ ನಡೆದಿದೆ.

ಜಲ್ಲಿ ತುಂಬಿಸಿಕೊಂಡು ವಿಟ್ಲದಿಂದ ಲಾರಿಯು ಬದಿಯಡ್ಕದೆಡೆಗೆ ಹೋಗುತ್ತಿತ್ತು‌. ಈ ವೇಳೆ ಲಾರಿಯಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಲಾರಿಯನ್ನು ನಿಲ್ಲಿಸಿದ್ದಾರೆ. ಆದರೆ ಕ್ಷಣಾರ್ಧದಲ್ಲೇ ಲಾರಿ ಪೂರ್ತಿ ಬೆಂಕಿ ಕಾಣಿಸಿಕೊಂಡಿದೆ.

ಲಾರಿಯಲ್ಲಿದ್ದವರು ಪಾರಾಗಿದ್ದಾರೆ. ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಸ್ಥಳಕ್ಕೆ ದೌಢಾಯಿಸಿದ ಅಗ್ನಿಶಾಮಕ ದಳ ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ.

Ads on article

Advertise in articles 1

advertising articles 2

Advertise under the article