ಟ್ಯಾಂಕರ್ ಪಲ್ಟಿ: ಡೀಸೆಲ್‌ ತುಂಬಿಕೊಳ್ಳಲು ಜನರ ನೂಕುನುಗ್ಗಲು

ವಿಜಯಪುರ: ಬ್ರೇಕ್ ಪೇಲ್ ಆಗಿದ್ದ ಟ್ಯಾಂಕರ್ ಒಂದು ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಡೀಸೆಲ್ ತುಂಬಿಕೊಳ್ಳಲು ಜನರು ಮುಗಿಬಿದ್ದ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ. 

ವಿಜಯಪುರ ಜಿಲ್ಲೆಯ ಹೊರವಲಯದಲ್ಲಿರುವ ರಂಭಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಟ್ಯಾಂಕರ್ ಬ್ರೇಕ್ ಪೇಲ್ ಆಗಿ ಪಲ್ಟಿಯಾಗಿತ್ತು. ಪರಿಣಾಮ ಅದರಲ್ಲಿ ತುಂಬಿಸಿದ್ದ ಡೀಸೆಲ್‌ ಸೋರಿಕೆಯಾಗಿತ್ತು. ಇಷ್ಟಾಗುತ್ತಿದ್ದಂತೆ ಸ್ಥಳೀಯರು ಮುಗಿಬಿದ್ದು ಡಿಸೇಲ್ ತುಂಬಿಸಿಕೊಂಡಿದ್ದಾರೆ.

ಸ್ಥಳಕ್ಕೆ ಬಂದಿದ್ದ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ಜನರನ್ನು ಚದುರಿಸಲು ಹರಸಾಹಸಪಟ್ಟರು.
BREAKING NEWS
Loading latest news...
Join our WhatsApp Channel Powered By : Online Pudu