ದೇರಳಕಟ್ಟೆ: ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮರದಲ್ಲಿಯೇ ಮೃತ್ಯು

ಮಂಗಳೂರು: ಮಾವಿನಹಣ್ಣು ಕೀಳಲೆಂದು ಮರ ಹತ್ತಿದ ಯುವಕನೋರ್ವನು ಹೈಟೆನ್ಷನ್ ತಂತಿ ಸ್ಪರ್ಶಿಸಿ ಮರದಲ್ಲಿಯೇ ಮೃತಪಟ್ಟ ದಾರುಣ ಘಟನೆಯೊಂದು ನಗರದ ದೇರಳಕಟ್ಟೆ ಬಳಿಯ ಜಲಾಲ್ ಬಾಗ್ ಎಂಬಲ್ಲಿ ನಡೆದಿದೆ.

ಹರೇಕಳದ ಉಲ್ಲಾಸ್ ನಗರ ನಿವಾಸಿ ಮಹಮ್ಮದ್ ಇಲಿಯಾಸ್(23) ಮೃತಪಟ್ಟ ದುರ್ದೈವಿ. 


ಮಹಮ್ಮದ್ ಇಲಿಯಾಸ್ ದೇರಳಕಟ್ಟೆಯ ಜಲಾಲ್ ಬಾಗ್ ನಲ್ಲಿ  ಮಾವಿನಮರ ಹತ್ತಿ ಹಣ್ಣು ಕೀಳುತ್ತಿದ್ದರು‌. ಈ ಸಂದರ್ಭ ಅವರು ಹಣ್ಣು ಕೀಳುತ್ತಿದ್ದ ಕಬ್ಬಿಣದ ಸಲಾಕೆ ಹೈಟೆನ್ಷನ್ ತಂತಿಯನ್ನು ಸ್ಪರ್ಶಿಸಿದೆ. ಪರಿಣಾಮ ಆತ ಮರದಲ್ಲಿಯೇ ಮೃತಪಟ್ಟಿದ್ದಾನೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.