-->
1000938341
'ಪತಿಯನ್ನು ತೊರೆದು ಬರಬೇಕು ಇಲ್ಲದಿದ್ದಲ್ಲಿ ಫೋಟೋ ವೈರಲ್ ಮಾಡುವೆ': ಸಂಕಷ್ಟಕ್ಕೊಳಗಾದ ವಿವಾಹಿತೆಯಿಂದ ಠಾಣೆಗೆ ದೂರು

'ಪತಿಯನ್ನು ತೊರೆದು ಬರಬೇಕು ಇಲ್ಲದಿದ್ದಲ್ಲಿ ಫೋಟೋ ವೈರಲ್ ಮಾಡುವೆ': ಸಂಕಷ್ಟಕ್ಕೊಳಗಾದ ವಿವಾಹಿತೆಯಿಂದ ಠಾಣೆಗೆ ದೂರು

ಶಿವಮೊಗ್ಗ: ವಿವಾಹಕ್ಕೆ ಮುನ್ನ ಯುವಕನೊಂದಿಗಿನ ಸಲುಗೆ ವಿವಾಹಿತೆಗೆ ಕಂಟಕವಾಗಿ ಪರಿಣಮಿಸಿದೆ. ಇದೀಗ ಆ ಯುವಕ ಪತಿಯನ್ನು ತೊರೆದು ತನ್ನೊಂದಿಗೆ ಬರಬೇಕು. ಇಲ್ಲದಿದ್ದಲ್ಲಿ ತಾವೀರ್ವರು  ಜೊತೆಗಿದ್ದ ಫೋಟೋಗಳನ್ನು ಪತಿಗೆ, ಕುಟುಂಬದವರಿಗೆ ಶೇರ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದಾನೆ. ಇದರಿಂದ ಬೇಸತ್ತ ಯುವತಿಯೀಗ ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾಳೆ.

ಶಿವಮೊಗ್ಗದ ಈ ಯುವತಿಗೆ ಐದು ವರ್ಷಗಳ ಹಿಂದೆ ಗಿರೀಶ್ ಎಂಬಾತನ ಪರಿಚಯವಾಗಿದೆ. ಇಬ್ಬರೂ ಪರಸ್ಪರ ಆತ್ಮೀಯರಾಗಿದ್ದು, ಅದು ಸಲುಗೆಗೆ ತಿರುಗಿದೆ. ಪರಸ್ಪರ ಫೋಟೋ ವಿನಿಮಯ ಮಾಡುವಲ್ಲಿವರೆಗೆ ಹೋಗಿತ್ತು. ಆದರೆ 7ತಿಂಗಳ ಹಿಂದೆ ಯುವತಿಗೆ ಬೇರೆ ಮದುವೆಯಾಯಿತು. ಆ ಬಳಿಕ ಯುವತಿ ಬೇರೆ ಮದುವೆಯಾಗಿದ್ದರಿಂದ ಕುಪಿತನಾದ ಯುವಕ ಪತಿಯನ್ನು ತೊರೆದು ತನ್ನೊಂದಿಗೆ ಬರಬೇಕೆಂದು ಆಕೆಗೆ ಬೆದರಿಕೆಯೊಡ್ಡುತ್ತಿದ್ದಾನೆ‌. 

ಆತನೊಂದಿಗೆ ಸಲುಗೆಯಿಂದ ಇರೋದನ್ನೇ ತಪ್ಪಾಗಿ ಅರ್ಥೈಸಿಕೊಂಡ ಯುವಕ ಆಕೆ ಬೇರೆ ಮದುವೆಯಾಗಿರುವುದರಿಂದ ಈ ರೀತಿ ಮಾಡುತ್ತಿದ್ದಾನೆ ಎನ್ನಲಾಗಿದೆ. ಇದೀಗ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

Ads on article

Advertise in articles 1

advertising articles 2

Advertise under the article