-->
ಪ್ರೇಯಸಿಯೊಂದಿಗೆ ಏಕಾಂತದಲ್ಲಿದ್ದ ಸಂದರ್ಭ ಪತ್ನಿ ಕೈಗೆ ಸಿಕ್ಕಿಬಿದ್ದ ಯುವಕ: ಇಬ್ಬರನ್ನೂ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು!

ಪ್ರೇಯಸಿಯೊಂದಿಗೆ ಏಕಾಂತದಲ್ಲಿದ್ದ ಸಂದರ್ಭ ಪತ್ನಿ ಕೈಗೆ ಸಿಕ್ಕಿಬಿದ್ದ ಯುವಕ: ಇಬ್ಬರನ್ನೂ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು!

ಕೊಂಡಗಾಂವ: ಇಲ್ಲಿನ ಉರಂದಬೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಗೈ ಗ್ರಾಮದಲ್ಲಿ ಏಕಾಂತದಲ್ಲಿದ್ದ ಯುವಕ - ಯುವತಿಯನ್ನು ಬೆತ್ತಲೆಯಾಗಿ ಗ್ರಾಮದ ಸುತ್ತ ಮೆರವಣಿಗೆ ಮಾಡಿದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಇದೀಗ ಇದರ ವೀಡಿಯೋ ಹಾಗೂ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪತಿ ಆತನ ಪ್ರೇಯಸಿಯೊಂದಿಗೆ ಏಕಾಂತದಲ್ಲಿದ್ದ ವೇಳೆ ಪತ್ನಿ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾನೆ. ಪರಿಣಾಮ ಕುಪಿತಗೊಂಡ ಪತ್ನಿ ಹೊರಗಿನಿಂದ ಕೊಠಡಿಗೆ ಬೀಗ ಜಡಿದು ಗಲಾಟೆ ಆರಂಭಿಸಿದ್ದಾಳೆ. ಅಲ್ಲದೆ ಇಡೀ ಗ್ರಾಮವನ್ನು ಒಟ್ಟುಗೂಡಿಸಿ ತನಗಾದ ಸಂಕಷ್ಟವನ್ನು ಹೇಳಿಕೊಂಡಿದ್ದಾಳೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೆರಳಿದ್ದು, ಪತ್ನಿಯ ಮಾತಿನಂತೆ ಇಬ್ಬರಿಗೂ ಶಿಕ್ಷೆ ನೀಡಿದ್ದಾರೆ. ಮೊದಲು ಯುವಕ ಹಾಗೂ ಆತನ ಪ್ರೇಯಸಿಯನ್ನು ಸರಿಯಾಗಿ ಥಳಿಸಿ, ಬಳಿಕ ಅವರಿಬ್ಬರನ್ನು ಸಂಪೂರ್ಣ ವಿವಸ್ತ್ರಗೊಳಿಸಿದ್ದಾರೆ. ಆ ಹೆಗಲ ಮೇಲೆ ಕಟ್ಟಿಗೆ ಇಟ್ಟು, ಅವರ ಕೈಗಳನ್ನು ಕಟ್ಟಿಗೆಗೆ ಕಟ್ಟಿ ಇಬ್ಬರನ್ನೂ ಬೆತ್ತಲೆಯಾಗಿ ಇಡೀ ಗ್ರಾಮವನ್ನು ಸುತ್ತಾಡಿಸಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ವಿಶೇಷ ತಂಡವನ್ನು ರಚಿಸಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ಸಂತ್ರಸ್ತರಿಬ್ಬರನ್ನು ವಿಚಾರಣೆ ನಡೆಸಲಾಗಿದೆ. ಅವರ ಹೇಳಿಕೆಯನ್ವಯ ಸಂತ್ರಸ್ತ ಯುವಕನ ಪತ್ನಿ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100