ಮಂಗಳೂರು: ರೌಡಿಶೀಟರ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ 9ಮಂದಿ ಅಂದರ್

ಮಂಗಳೂರು: ಇತ್ತೀಚೆಗೆ ನಗರದ ಬೈಕಂಪಾಡಿ ಸಮೀಪದ ಮೀನಕಳಿಯದಲ್ಲಿ ರೌಡಿಶೀಟರ್ ರಾಜಾ ಅಲಿಯಾಸ್ ರಾಘವೇಂದ್ರನ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಸಹಕಾರ ನೀಡಿದ್ದಾರೆಂಬ ಆರೋಪದಲ್ಲಿ ಪಣಂಬೂರು ಪೊಲೀಸರು ಇಂದು ಓರ್ವ ಮಹಿಳೆ ಸೇರಿ 9ಮಂದಿ ಆರೋಪಿಗಳನ್ನು  ಬಂಧಿಸಿದ್ದಾರೆ‌.

ಸುರತ್ಕಲ್ ಇಡ್ಯಾ ನಿವಾಸಿ ಚೊಟ್ಟೆ ಸಂದೀಪ್(45), ಕೃಷ್ಣಾಪುರ ನಿವಾಸಿ ಸಂದೀಪ್ ದೇವಾಡಿಗ(32), ತಡಂಬೈಲ್ ನಿವಾಸಿ ಲಿಖಿತ್(31), ತೋಟ ಬೇಂಗ್ರೆ ನಿವಾಸಿ ಕಕ್ಕೆ ದೀಕ್ಷಿತ್(23), ಮೀನಕಳಿಯ ನಿವಾಸಿ ತುಷಾರ್ ಅಮೀನ್(30), ಕೂಳೂರು , ಪಂಜಿಮೊಗರು ನಿವಾಸಿ ವಿನೋದ್ ಕುಮಾರ್ (32), ಬಜ್ಪೆ ನಿವಾಸಿ ಲತೇಶ್ ಜೋಗಿ(27), ಬೈಕಂಪಾಡಿ ನಿವಾಸಿ ಸಂದೀಪ್ ಪುತ್ರನ್(36), ಕಾವೂರು ಮೂಡುಶೆಡ್ಡೆ ನಿವಾಸಿ ಅಕ್ಷಿತಾ(28) ಬಂಧಿತ ಆರೋಪಿಗಳು.

ಹಳೆಯ ವೈಷಮ್ಯವನ್ನು ಹೊಂದಿದ್ದ ಆರೋಪಿಗಳಾದ ಅರ್ಜುನ್ ಮೂಡುಶೆಡ್ಡೆ ಹಾಗೂ ಬಿಂದಾಸ್ ಮನೋಜ್ ತಮ್ಮ ಸ್ನೇಹಿತನೇ ಆಗಿದ್ದ ರಾಜಾ ಅಲಿಯಾಸ್ ರಾಘವೇಂದ್ರ ಎಂಬ ರೌಡಿಶೀಟರ್ ನನ್ನು ಜೂ.6ರಂದು ಹತ್ಯೆ ಮಾಡಿದ್ದರು. ಈ ಇಬ್ಬರೂ ಆರೋಪಿಗಳಿಗೆ ಕೊಲೆಕೃತ್ಯಕ್ಕೆ ಸಹಕರಿಸಿರುವ, ಹಣಕಾಸು ನೆರವು ನೀಡಿರುವ, ತಪ್ಪಿಸಿಕೊಳ್ಳಲು ಆಶ್ರಯ ನೀಡಿರುವ ಆರೋಪದ ಮೇಲೆ ಈ 9ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu