
ಉಡುಪಿ: ಅಂಗಡಿಯ ಶಟರ್ ಮುರಿದು 5.47 ಲಕ್ಷ ರೂ. ಮೌಲ್ಯದ ಐಟಿಸಿ ಸಿಗರೇಟ್ ಪ್ಯಾಕ್ ಎಗರಿಸಿದ ಖದೀಮ ಕಳ್ಳರು
6/23/2022 09:30:00 PM
ಉಡುಪಿ: ಇಲ್ಲಿನ ಅಂಗಡಿಯೊಂದರ ಶಟರ್ ಮುರಿದ ಖದೀಮ ಕಳ್ಳರು 5.47 ಲಕ್ಷ ರೂ.ಮೌಲ್ಯದ ಐಟಿಸಿ ಸಿಗರೇಟ್ ಪ್ಯಾಕ್ ಕಳವುಗೈದಿರುವ ಘಟನೆ ನಡೆದಿದೆ.
ಅಂಬಲಪಾಡಿ ನಿವಾಸಿ ಆನಂದ ಭಟ್ ಎಂಬವರು ಪ್ರಶಾಂತ್ ಶೆಟ್ಟಿಯವರೊಂದಿಗೆ ಸೇರಿ ಬಲಾಯಿಪಾದೆ ಬಳಿ ಡಿಸ್ಟ್ರಿಬ್ಯೂಶನ್ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದರು. ಈ ಡಿಸ್ಟ್ರಿಬ್ಯೂಷನ್ ಅಂಗಡಿಯಲ್ಲಿ ಐಟಿಸಿ ಕಂಪೆನಿಯ ಸಿಗರೇಟ್ ಹಾಗೂ ಇತರ ಸಾಮಾಗ್ರಿಗಳನ್ನು ಮಾರಾಟಕ್ಕೆಂದು ಇಟ್ಟಿದ್ದರು.
ಆದರೆ ಜೂ.21ರಿಂದ 22ರ ನಡುವಿನ ಅವಧಿಯಲ್ಲಿ ಅಂಗಡಿಯ ಶಟರ್ ಮುರಿದ ಕಳ್ಳರು 5,47,744 ರೂ.ಮೌಲ್ಯದ ಐಟಿಸಿ ಕಂಪೆನಿಯ ಸಿಗರೇಟ್ ಪ್ಯಾಕ್‌ಗಳನ್ನು ಕಳವುಗೈದಿದ್ದಾರೆ. ಅಲ್ಲದೆ ಕ್ಯಾಶ್ ಡ್ರಾವರ್‌ನಲ್ಲಿದ್ದ 17 ಸಾವಿರ ರೂ. ನಗದು ಎಗರಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.