2ನೇ ಪತಿಯೊಂದಿಗೆ ಮಜವಾಗಿರಲು ಅಪ್ರಾಪ್ತ ಪುತ್ರಿಗೆ ಎರಡೆರಡು ಬಾರಿ ಮದುವೆ ಮಾಡಿದ ಹೆತ್ತವ್ವೆ

ಧಾರ್ಚುಲಾ (ಉತ್ತರಾಖಂಡ): ಪತಿಯನ್ನು ತೊರೆದ  ಮಹಿಳೆಯೋರ್ವಳು ಮತ್ತೊಂದು ಮದುಯಾಗಿ, ಆತನೊಂದಿಗೆ ಮಜವಾಗಿರಲು ತಾನೇ ಹೆತ್ತ ಅಪ್ರಾಪ್ತ ಪುತ್ರಿಯನ್ನು ಎರಡೆರಡು ಬಾರಿ ಮದುವೆ ಮಾಡಿರುವ ಹೇಯ ಘಟನೆಯೊಂದು ಉತ್ತರಾಖಂಡದ ಧಾರ್ಚುಲಾದಲ್ಲಿ ನಡೆದಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ ಹಾಗೂ ಮಲ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. 

ಬಾಲ್ಯ ವಿವಾಹ ವಿರೋಧ ಕಾಯ್ದೆಯನ್ವಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. 12 ವರ್ಷದ ಈ ಬಾಲಕಿಯನ್ನು ಕೆಲ ತಿಂಗಳ ಹಿಂದೆ ಇಬ್ಬರೂ ಸೇರಿ ವಿವಾಹ ಮಾಡಿಸಿದ್ದರು. ಆದರೆ ಬಾಲಕಿಗೆ ಪತಿಯ ಮನೆಯಲ್ಲಿ ತೀವ್ರ ಹಿಂಸೆ ಕೊಡಲಾಗುತ್ತಿತ್ತು. ಈ ದೌರ್ಜನ್ಯ ಸಹಿಸಿಕೊಳ್ಳಲಾಗದೆ ಆಕೆ ಓಡಿ ಬಂದು ತವರು ಮನೆ ಸೇರಿದ್ದಳು. 

ಬಾಲಕಿ ಮತ್ತೆ ಮನೆ ಸೇರಿರುವುದು ಆಕೆಯ ತಾಯಿ ಮತ್ತು ಎರಡನೇ ಪತಿಗೆ ಹಿಂಸೆ ಆದಂತಾಗಿತ್ತು. ಅದಕ್ಕಾಗಿ ಕೆಲವೇ ತಿಂಗಳಿನಲ್ಲಿ ಮತ್ತೆ 36 ವರ್ಷದವನೊಂದಿಗೆ ಮದುವೆ ಮಾಡಿಸಿದ್ದಾರೆ. ಬಾಲಕಿ ಗರ್ಭಿಣಿಯಾದ ಪರಿಣಾಮ ಈ ಪ್ರಕರಣ ಬೆಳಕಿಗೆ ಬಂದಿದೆ. ಚಿಕಿತ್ಸೆಗೆಂದು ಕರೆದುಕೊಂಡು ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. 

ಈ ಬಗ್ಗೆ ಶಿಶು ಅಭಿವೃದ್ಧಿ ಇಲಾಖೆಗೆ ವಿಷಯ ತಿಳಿದಿದ್ದು, ಅವರು ಇದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಾಯಿ ಹಾಗೂ ಆಕೆಯ ಎರಡನೇ ಪತಿಯನ್ನು ಬಂಧಿಸಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu