-->
19ರ ಕಾಮುಕನಿಂದ 15ರ ಬಾಲೆಯ ಮೇಲೆ ನಿರಂತರ ಅತ್ಯಾಚಾರ!

19ರ ಕಾಮುಕನಿಂದ 15ರ ಬಾಲೆಯ ಮೇಲೆ ನಿರಂತರ ಅತ್ಯಾಚಾರ!

ಹೈದರಾಬಾದ್​: 19ರ ಕಾಮುಕ ಯುವಕನೋರ್ವನು 15ರ ಬಾಲೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಮೀರ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 

ನಲ್ಲಕುಂಟ ನಿವಾಸಿ ಅಮಿತ್ ವರ್ಧನ್ (19) ಅತ್ಯಾಚಾರವೆಸಗಿರುವ ಆರೋಪಿ.

ಬಾಲಕಿ ಕಾಲೇಜೊಂದರಲ್ಲಿ ಇಂಟರ್ ಮೀಡಿಯೇಟ್ ವ್ಯಾಸಂಗ ಮಾಡುತ್ತಿದ್ದಾಳೆ. ಕಳೆದ ಬಾರಿ ಇದೇ ಕಾಲೇಜಿನ ವಿದ್ಯಾರ್ಥಿ ಅಮಿತ್ ವರ್ಧನ್ ಎಂಬಾತ ಈ ಬಾಲಕಿಗೆ ಪರಿಚಯವಾಗಿದ್ದಾನೆ. ಆತ ಬಾಲಕಿಯ ಫೋನ್ ನಂಬರ್ ಪಡೆದಿದ್ದ. ಆ ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಈ ನಡುವೆ ಆತ ಪ್ರಪೋಸಲ್ ಸ್ವೀಕರಿಸುವಂತೆ ಹೇಳುತ್ತಿದ್ದ. ಆತನ ಮಾತನ್ನು ನಂಬಿದ ಬಾಲಕಿ 2022ರ ಜನವರಿಯಲ್ಲಿ ಅಮಿತ್ ವರ್ಧನ್ ಪ್ರೀತಿಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾಳೆ. ಆ ದಿನದಿಂದ ಫೋನ್​ನಲ್ಲಿ ಇಬ್ಬರ ಪ್ರೀತಿಯ ಮಾತುಗಳು ಜೋರಾಗಿಯೇ ನಡೆಯುತ್ತಿತ್ತು.

ಇವರ ಪ್ರೇಮ ಪ್ರಕರಣ ಸಾಗುತ್ತಿರುವಾಗಲೇ, ಫೆಬ್ರವರಿಗೆ ಒಂದು ದಿನ ಆಕೆಯ ಮನೆಗೆ ಹೋಗಿದ್ದಾನೆ. ಅಂದು ಆಕೆಗೆ ಮದುವೆಯಾಗುವ ಆಮಿಷವೊಡ್ಡಿ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೆ ಅವರಿಬ್ಬರ ಏಕಾಂತದ ದೃಶ್ಯಗಳನ್ನು ಸಹ ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾನೆ.

ಆ ಬಳಿಕ ಅಮಿತ್ ವರ್ಧನ್​ ತನ್ನ ನಿಜ ಬಣ್ಣವನ್ನು ಬಯಲು ಮಾಡಿದ್ದಾನೆ. ಏಕಾಂತದ ದೃಶ್ಯಗಳನ್ನು ತೋರಿಸಿ ಆ ಬಳಿಕ ಬಾಲಕಿಯನ್ನು ಹೆದರಿಸಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈ ವಿಷಯ ಹೊರಗೆ ಬಂದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದಾನೆ. ಇದೀಗ ಬೇಸತ್ತ ಸಂತ್ರಸ್ತ ಬಾಲಕಿ ಮೀರ್‌ಪೇಟ್ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಮಿತ್ ವರ್ಧನ್​ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article