-->
ಮಂಗಳೂರು ಏರ್ಪೋಟ್ ನಲ್ಲಿ ಸ್ಯಾನಿಟರಿ ಪ್ಯಾಡ್ ನೊಳಗೆ ಬಚ್ಚಿಟ್ಟು ಅಕ್ರಮ ಸಾಗಾಟದ 1.684 ಕೆಜಿ ಚಿನ್ನ ಸೀಝ್

ಮಂಗಳೂರು ಏರ್ಪೋಟ್ ನಲ್ಲಿ ಸ್ಯಾನಿಟರಿ ಪ್ಯಾಡ್ ನೊಳಗೆ ಬಚ್ಚಿಟ್ಟು ಅಕ್ರಮ ಸಾಗಾಟದ 1.684 ಕೆಜಿ ಚಿನ್ನ ಸೀಝ್

ಮಂಗಳೂರು : ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್ ನೊಳಗೆ ಬಚ್ಚಿಟ್ಟು ಅಕ್ರಮ ಸಾಗಾಟದ ಬರೋಬ್ಬರಿ 86.89 ಲಕ್ಷ ರೂ. ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮಹಿಳೆಯೊಬ್ಬಳು ತನ್ನ ಒಳ
 ಉಡುಪು ಹಾಗೂ ಸ್ಯಾನಿಟರಿ 
ಪ್ಯಾಡ್ ನಲ್ಲಿ ಬಚ್ಚಿಟ್ಟು 24 ಕ್ಯಾರೆಟ್ ಚಿನ್ನ ಸಾಗಾಟ ಮಾಡುತ್ತಿದ್ದಳು. ಈಕೆಯನ್ನು ತಪಾಸಣೆ ಮಾಡುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳು ಈ ಕೃತ್ಯವನ್ನು ಪತ್ತೆ ಹಚ್ಚಿದ್ದಾರೆ.

ಈಕೆ ಒಳ ಉಡುಪಿನೊಳಗೆ ಆಯತಾಕೃತಿಯ ಚಿನ್ನದ ಗಟ್ಟಿಯ ರೂಪದಲ್ಲಿ ಹಾಗೂ ಕಂದು ಬಣ್ಣದ ಪುಡಿಯೊಳಗೆ ಚಿನ್ನವನ್ನು ಮೂರು ಪ್ಲಾಸ್ಟಿಕ್ ಕವರ್ ಒಳಗಡೆ ಮರೆಮಾಡಿ ಸ್ಯಾನಿಟರಿ ಪ್ಯಾಡ್ ಒಳಗಡೆ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದಳು. ತಕ್ಷಣ ಚಿನ್ನ ಸಹಿತ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಈಕೆಯಿಂದ 1.684 ಕೆಜಿ 24 ಕ್ಯಾರೆಟ್ ನ 86,89,440 ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article