-->
ಮಂಗಳೂರು ಸಮುದ್ರ ತೀರದಲ್ಲಿ ತಾಂತ್ರಿಕ ದೋಷಕ್ಕೊಳಗಾದ ಸಿರಿಯಾ ದೇಶದ ಹಡಗು: 15 ಸಿಬ್ಬಂದಿಯ ರಕ್ಷಣೆ

ಮಂಗಳೂರು ಸಮುದ್ರ ತೀರದಲ್ಲಿ ತಾಂತ್ರಿಕ ದೋಷಕ್ಕೊಳಗಾದ ಸಿರಿಯಾ ದೇಶದ ಹಡಗು: 15 ಸಿಬ್ಬಂದಿಯ ರಕ್ಷಣೆ

ಮಂಗಳೂರು: ಅರಬ್ಬಿ ಸಮುದ್ರ ತೀರದಲ್ಲಿ ತಾಂತ್ರಿಕ ದೋಷಕ್ಕೊಳಗಾಗಿ ಅಪಾಯಕ್ಕೆ ಸಿಲುಕಿದ್ದ ಸಿರಿಯಾ ದೇಶದ ಹಡಗಿನಲ್ಲಿದ್ದ 15 ಮಂದಿ ಸಿಬ್ಬಂದಿಯನ್ನು ಹಡಗ  ತಕ್ಷಣ ಕೋಸ್ಟ್ ಗಾರ್ಡ್ ರಕ್ಷಿಣೆ ಮಾಡಿದೆ.


ಸಿರಿಯಾ ದೇಶದ MV Princess Moral ಹಡಗು ಮಂಗಳೂರಿನಿಂದ 5-6 ನಾಟಿಕಲ್ ದೂರದಲ್ಲಿ ಸಮುದ್ರದಲ್ಲಿ ಸಾಗುತ್ತಿರುವಾಗ ತಾಂತ್ರಿಕ ದೋಷಕ್ಕೊಳಗಾಗಿದೆ. ಈ ಹಡಗಿನಲ್ಲಿ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸಲಾಗುತ್ತಿತ್ತು‌. ಈ ಹಡಗು ಓಮನ್ ನಿಂದ ಈಜಿಪ್ಟ್ ಗೆ ಪ್ರಯಾಣ ಬೆಳೆಸಿತ್ತು. ಆದರೆ ಸಮುದ್ರ ಮಧ್ಯೆ ಪ್ರಯಾಣ ಮಾಡುವ ವೇಳೆ ಹಡಗಿನ ಒಳಭಾಗದ ಸಣ್ಣ ರಂಧ್ರದ ಮೂಲಕ ನೀರು ಒಳನುಸುಳಲಾರಂಭಿಸಿದೆ‌. ಪರಿಣಾಮ ಹಡಗಿನೊಳಗಿದ್ದ 15 ಮಂದಿ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು.


ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಹಡಗಿನೊಳಗೆ ಅಪಾಯಕ್ಕೆ ಸಿಲುಕಿದ್ದ 15 ಮಂದಿ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಇದೀಗ ಈ ಹಡಗನ್ನು ಅಂಡರ್ ವಾಟರ್ ನಲ್ಲಿ ದುರಸ್ತಿ ಮಾಡಲು ಮಂಗಳೂರು ಹಳೆಯ ಬಂದರು ವ್ಯಾಪ್ತಿಯ ದಕ್ಷಿಣ ಬದಿಯ ಸುಮಾರು 5.2ದೂರದಲ್ಲಿ ಲಂಗರು ಹಾಕಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100