ಭಾರತ ಸಹಿತ 15 ದೇಶಗಳಿಗೆ ಪ್ರಯಾಣ ನಿಷೇಧ: ಸೌದಿ ಅರೇಬಿಯಾ

ಭಾರತ ಸಹಿತ 15 ದೇಶಗಳಿಗೆ ಪ್ರಯಾಣ ನಿಷೇಧ: ಸೌದಿ ಅರೇಬಿಯಾ






ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ಮಾಡದಂತೆ ಸೌದಿ ಅರೇಬಿಯಾ ತನ್ನ ನಾಗರಿಕರಿಗೆ ನಿರ್ಬಂಧಗಳನ್ನು ಹೇರಿದೆ.



ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ಸಂಭವನೀಯ ಮಂಕಿಪಾಕ್ಸ್‌ ಸೋಂಕು ಹರಡುವುದನ್ನು ತಡೆಯಲು ಸೌದಿ ಅರೇಬಿಯಾ ಈ ನಿರ್ಧಾರ ಕೈಗೊಂಡಿದೆ. 



ಹಾಗಾಗಿ, ತನ್ನ ನಾಗರಿಕರನ್ನು ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ಮಾಡದಂತೆ ಎಚ್ಚರಿಕೆ ನೀಡಿದೆ.



ಇರಾನ್, ಟರ್ಕಿ, ಇಂಡೋನೇಷ್ಯಾ, ವಿಯೆಟ್ನಾ, ಲಿಬಿಯಾ, ಲೆಬನಾನ್, ಸಿರಿಯಾ, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ, ಇಥಿಯೋಪಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಅರ್ಮೇನಿಯಾ, ಬೆಲಾರಸ್ ಮತ್ತು ವೆನೆಜುವೆಲಾ - ಇವು ನಿರ್ಬಂಧಕ್ಕೆ ಒಳಗಾದ ಅನ್ಯ ದೇಶಗಳು.


BREAKING NEWS
Loading latest news...
Join our WhatsApp Channel Powered By : Online Pudu