
ಮಂಗಳೂರು ಪೊಲೀಸ್ ಕಮಿಷನರ್ ಕಂಠದಿಂದ ಮೂಡಿ ಬಂದ 'ಟಗರು' ಸಿನಿಮಾ ಹಾಡಿಗೆ ಹ್ಯಾಟ್ರಿಕ್ ಹೀರೊ ಸಖತ್ ಸ್ಟೆಪ್
5/02/2022 08:05:00 AM
ಮಂಗಳೂರು: ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರ ಕಂಠದಿಂದ ಮೂಡಿ ಬಂದ 'ಟಗರು' ಸಿನಿಮಾದ ಹಾಡಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಖತ್ ಸ್ಟೆಪ್ ಹಾಕಿದ್ದಾರೆ.
ಮಂಗಳೂರು ನಗರದ ಎಸ್ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅವರ ನೇತೃತ್ವದಲ್ಲಿ ನಡೆದಿರುವ ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡು ಬಂದಿದೆ. ನಟ ಶಿವರಾಜ್ ಕುಮಾರ್ ಹಾಗೂ ಗೀತಾ ದಂಪತಿ ಮತ್ತು ಟಗರು ಸಿನಿಮಾ ನಿರ್ಮಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಕೊನೆಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು 'ಟಗರು' ಸಿನಿಮಾ ಹಾಡಿಗೆ ಶಿವರಾಜ್ ಕುಮಾರ್ ಅವರು ಸಖತ್ ಸ್ಟೆಪ್ ಹಾಕಿದರು. ಬಳಿಕ ಅಪ್ಪುವಿಗಾಗಿ ಶಿವಣ್ಣ 'ಬಾನದಾರಿಯಲ್ಲಿ ಸೂರ್ಯ ಜಾರಿ ಬಂದ' ಹಾಡು ಹಾಡಿದರು.