-->
ನೆರೆಮನೆಯಾಕೆಯ ಮೇಲೆ ಕಣ್ಣು ಹಾಕಿದ ಕಾಮುಕ: ಪತಿಗೆ ಕೆಲಸ ಕೊಟ್ಟು ದುಷ್ಕೃತ್ಯ ಎಸಗಿದ!

ನೆರೆಮನೆಯಾಕೆಯ ಮೇಲೆ ಕಣ್ಣು ಹಾಕಿದ ಕಾಮುಕ: ಪತಿಗೆ ಕೆಲಸ ಕೊಟ್ಟು ದುಷ್ಕೃತ್ಯ ಎಸಗಿದ!


ಹುಬ್ಬಳ್ಳಿ: ನೆರೆಮನೆಯ ವಿವಾಹಿತ ಮಹಿಳೆಯ ಮೇಲೆ ಕಾಮುಕ ದೃಷ್ಟಿ ಹಾಕಿದ ಕಿರಾತಕನೊಬ್ಬ ಆಕೆಯ ಪತಿಯನ್ನು ತನ್ನ ಮನೆಯ ಕಾರು ಚಾಲಕನನ್ನಾಗಿ ಮಾಡಿಕೊಂಡು, ಮಹಿಳೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ. 

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮ ನಿವಾಸಿ ಮೌಲಾಸಾಬ್ ಮಹ್ಮದ್ ಸಾಬ್ ಹುಲಸೂರ ಎಂಬಾತನೇ ಈ ಕಾಮುಕ. 

ಕಾಮುಕ ಮೌಲಾಸಾಬ್​ ಮಹಿಳೆಗಿಂತಲೂ ಕಿರಿಯ ವಯಸ್ಸಿನವನಾಗಿದ್ದಾನೆ.
ಆಕೆಯ ಮೇಲೆ ಈತನ ಕಾಮದ ಕಣ್ಣು ಬಿದ್ದಿದೆ. ಆಕೆಯನ್ನು ಹೇಗಾದರೂ ತನ್ನವಳನ್ನಾಗಿಸುವ ಪ್ಲ್ಯಾನ್​ ಮಾಡಿದ್ದಾನೆ. ಈಗಾಗಲೇ ಮದುವೆಯಾಗಿ ಮಕ್ಕಳನ್ನು ಹೊಂದಿರುವ ಈ ಕಾಮುಕ ಬಹಳ ಯೋಚನೆ ಮಾಡಿ ಆಕೆಯ ಪತಿಯನ್ನು ತನ್ನ ಕಾರಿನ ಚಾಲಕನನ್ನಾಗಿ ಮಾಡಿಕೊಂಡಿದ್ದಾನೆ. 

ಈತನ ದುಷ್ಕೃತ್ಯ ಅರಿಯದ ಪತಿ ಈತನ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಮೌಲಾಸಾಬ್​ನ ಉದ್ದೇಶವೇ ಬೇರೆಯಾಗಿತ್ತು. ಕೆಲಸದ ನಿಮಿತ್ತ ಪದೇ ಪದೇ ಆಕೆಯ ಪತಿಯನ್ನು ಬೇರೆ ಊರಿಗೆ ಕಳುಹಿಸುತ್ತಿದ್ದ. ಅಷ್ಟೇ ಅಲ್ಲದೇ ವಾಮಾಚಾರವನ್ನೂ ಕಲಿತಿದ್ದ ಮೌಲಾಸಾಬ್​, ಮಹಿಳೆ ಒಂಟಿಯಾಗಿದ್ದಾಗ ಪದೇ ಪದೇ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಬರೋಬ್ಬರಿ ಎರಡು ತಿಂಗಳು ಹೀಗೆಯೇ ಮಾಡಿದ್ದಾನೆ. ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿರುವ ವೀಡಿಯೋವನ್ನೂ ಈತ ಮಾಡಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ವೀಡಿಯೋ ವೈರಲ್​ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. 

ಅಷ್ಟೇ ಅಲ್ಲದೇ ಕಾರು ಚಲಾಯಿಸಿಕೊಂಡು ಹೋಗಿರುವ ಪತಿಯನ್ನು ಮರ್ಡರ್ ಮಾಡಿಸುತ್ತೇನೆ ಎಂದೂ ಹೆದರಿಸುತ್ತಿದ್ದ. ಈತನ ನೀಚತನ ಹೆಚ್ಚಾಗಿದ್ದರಿಂದ ಮಹಿಳೆ ಈಗ ದೂರು ದಾಖಲು ಮಾಡಿದ್ದಾರೆ. ಆದರೆ ಪ್ರಕರಣ ದಾಖಲಿಸಿ 25 ದಿನ ಕಳೆದರೂ ಇದುವರೆಗೂ ಆರೋಪಿಯ ಬಂಧನವಾಗಿಲ್ಲ ಎಂದು ತಿಳಿದುಬಂದಿದೆ. ಸಂತ್ರಸ್ತೆ ಹಾಗೂ ಆಕೆಯ ಪತಿಗೆ ಬೆದರಿಕೆಯನ್ನು ಹಾಕಲಾಗುತ್ತಿದೆ. ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ, ಊರಿಗೇ ಊಟ ಹಾಕೋದಾಗಿ ಬೆದರಿಕೆಗಳು ಬಂದಿವೆ ಎನ್ನಲಾಗುತ್ತಿದೆ. ಇದರಿಂದ ಬೆದರಿದ ಮಹಿಳೆ, ಪತಿ ಹಾಗೂ ಕುಟುಂಬದವರು ಊರನ್ನೇ ತೊರೆದಿದ್ದಾರೆ ಎನ್ನಲಾಗುತ್ತಿದೆ. ಹುಬ್ಬಳ್ಳಿ ಮಹಿಳಾ ಠಾಣೆ ಹಾಗೂ ಕಲಘಟಗಿ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನ್ನಲಾಗುತ್ತಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article