-->
ರಿವಾಲ್ವರ್ ತೋರಿಸಿ ಪಿಜಿ ಮಾಲಕನಿಂದ ವಿದ್ಯಾರ್ಥಿನಿಯ ಅತ್ಯಾಚಾರ

ರಿವಾಲ್ವರ್ ತೋರಿಸಿ ಪಿಜಿ ಮಾಲಕನಿಂದ ವಿದ್ಯಾರ್ಥಿನಿಯ ಅತ್ಯಾಚಾರ

ಮಂಗಳೂರು: ರಿವಾಲ್ವರ್ ತೋರಿಸಿ ಬೆದರಿಸಿ ಪಿಜಿ ಮಾಲಕನೇ ವಿದ್ಯಾರ್ಥಿನಿಯ ಅತ್ಯಾಚಾರ ಮಾಡಿದ ಘಟನೆ ಅಶೋಕನಗರ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ನಡೆದಿದೆ‌. ಕಾಮುಕ ಪಿಜಿ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಉದ್ಯಮಿ, ಪಿಜಿ ಮಾಲಕ ರವಿಶಂಕರ್ ಪ್ರಸಾದ್ ಬಂಧಿತ ಅಸಾಮಿ.

ಬಂಧಿತ ರವಿಶಂಕರ್ ಪ್ರಸಾದ್ ಬೆಂಗಳೂರಿನಲ್ಲಿ ಟೈಲ್ಸ್ ಉದ್ಯಮವನ್ನು ನಡೆಸುತ್ತಿದ್ದಾನೆ‌. ಅಲ್ಲದೆ ಈತ ಪಿಜಿಯನ್ನೂ ನಡೆಸುತ್ತಿದ್ದ. ಉನ್ನತ ವ್ಯಾಸಂಗ ಮಾಡಲು ಬಂದಿದ್ದ ವಿದ್ಯಾರ್ಥಿನಿಯೋರ್ವಳು ಈತನ ಪಿಜಿಯಲ್ಲಿದ್ದಳು. ಈ ಕಾಮುಕನ ಕಣ್ಣು ಆಕೆಯ ಮೇಲೆ ಬಿದ್ದಿದೆ.

ಈತ ರಿವಾಲ್ವರ್ ತೋರಿಸಿ ಬೆದರಿಕೆಯೊಡ್ಡಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಪೊಲೀಸ್ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಯೊಂದಿಗೆ ಆತನಲ್ಲಿದ್ದ ರಿವಾಲ್ವರ್ ಅನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಮೂರು ದಿನಗಳ ಕಾಲ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ‌.  

Ads on article

Advertise in articles 1

advertising articles 2

Advertise under the article