-->

ಹತ್ರಾಸ್ ನಲ್ಲಿ ನಡೆಯಿತು ಮತ್ತೊಂದು ಕ್ರೂರ ಅತ್ಯಾಚಾರ: ಯುವತಿಯನ್ನು ಕೈಕಾಲು ಕಟ್ಟಿ ಪಕ್ಕದ ಮನೆಯ ಮೇಲ್ಛಾವಣಿಗೆಸೆದ ಕಾಮುಕ

ಹತ್ರಾಸ್ ನಲ್ಲಿ ನಡೆಯಿತು ಮತ್ತೊಂದು ಕ್ರೂರ ಅತ್ಯಾಚಾರ: ಯುವತಿಯನ್ನು ಕೈಕಾಲು ಕಟ್ಟಿ ಪಕ್ಕದ ಮನೆಯ ಮೇಲ್ಛಾವಣಿಗೆಸೆದ ಕಾಮುಕ

ಹತ್ರಾಸ್(ಉತ್ತರಪ್ರದೇಶ): ಹತ್ರಾಸ್​ನಲ್ಲಿ ಯುವತಿಯೋರ್ವಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣವೊಂದು​ ದೇಶಾದ್ಯಂತ ಭಾರೀ ಸಂಚಲನ ಉಂಟು ಮಾಡಿತ್ತು. ಇದೀಗ ಹತ್ರಾಸ್ ನಲ್ಲಿ ಮತ್ತೊಂದು ಕ್ರೂರ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಸಯಾನ್ ಕೊತ್ವಾಲಿ ಪ್ರದೇಶದ ಕಾಮುಕ ಯುವಕನೋರ್ವನು, ಯುವತಿಯನ್ನು ಬಲವಂತವಾಗಿ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ಕೈ - ಕಾಲು ಕಟ್ಟಿ ಆಕೆಯನ್ನು ಪಕ್ಕದ ಮನೆಯ ಮೇಲ್ಛಾವಣಿಯ ಮೇಲೆ ಎಸೆದು ಕ್ರೂರತ್ವ ಮೆರೆದಿದ್ದಾನೆ.

ಮೇ 16ರಂದು ರಾತ್ರಿ ಮನೆಯಲ್ಲಿ ಮಲಗಿದ್ದ 18 ವರ್ಷದ ಯುವತಿಯನ್ನೇ ಅಪಹರಿಸಲಾಗಿತ್ತು. ಅದೇ ಗ್ರಾಮದ ಕಾಮುಕ ಯುವಕನೊಬ್ಬನು ಸಂತ್ರಸ್ತೆಯ ಬಾಯಿಯನ್ನು ಬಿಗಿಯಾಗಿ ಮುಚ್ಚಿ ಮಹಡಿಯ ಮೇಲೆ ಎಳೆದೊಯ್ದಿದ್ದಾನೆ. ಆ ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದು ತಾನು ಮಾಡಿದ್ದೆಂದು ಗೊತ್ತಾಗಬಾರದು ಎಂಬ ಕಾರಣಕ್ಕೆ ಯುವತಿಯ ಕೈ - ಕಾಲುಗಳನ್ನು ಕಟ್ಟಿ, ಬಾಯಿಯನ್ನು ಮುಚ್ಚಿ ಪಕ್ಕದ ಮನೆಯ ಟೆರೇಸ್​ ಮೇಲೆ ಎಸೆದಿದ್ದಾನೆ. 

ಇತ್ತ ಯುವತಿಯು ಮನೆಯಲ್ಲಿ ಕಾಣಿಸದಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಕೆಯ ಹುಡುಕಾಟ ನಡೆಸಿದ್ದಾರೆ. ಆ ಬಳಿಕ ಪಕ್ಕದ ಮನೆಯವರು ತಮ್ಮ ಮನೆಯ ಮಹಡಿಯ ಮೇಲೆ ಯುವತಿ ಒದ್ದಾಡುತ್ತಿರುವುದನ್ನು ಕಂಡು ಮಾಹಿತಿ ನೀಡಿದ್ದಾರೆ.

ಯುವತಿಯನ್ನು ವಿಚಾರಿಸಿದಾಗ ಗ್ರಾಮದ ನೀರಜ್​ ಎಂಬಾತ ತನ್ನನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿಸಿದ್ದಾಳೆ. ಈ ಬಗ್ಗೆ ಕುಟುಂಬಸ್ಥರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್​ ಅಧಿಕಾರಿಗಳು ಪರಿಶೀಲನೆ ನಡೆಸಿ, ಆರೋಪಿ ಯುವಕನ ಪತ್ತೆಗೆ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ. ಸಂತ್ರಸ್ತ ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article