-->

ಬಂಟ್ವಾಳ: ಮದುವೆಯಾಗುವೆನೆಂದು ನಂಬಿಸಿ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಮಗುವಿನ ಜನ್ಮಕ್ಕೆ ಕಾರಣನಾದ ಆರೋಪಿ‌ ಅರೆಸ್ಟ್

ಬಂಟ್ವಾಳ: ಮದುವೆಯಾಗುವೆನೆಂದು ನಂಬಿಸಿ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಮಗುವಿನ ಜನ್ಮಕ್ಕೆ ಕಾರಣನಾದ ಆರೋಪಿ‌ ಅರೆಸ್ಟ್

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಮಗುವಿನ ಜನ್ಮಕ್ಕೆ ಕಾರಣನಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಿನ್ನಿಗೋಳಿ ಸಮೀಪದ ಕೊಲ್ಲೂರು ನಿವಾಸಿ ಅಶ್ವತ್ಥ್ ಬಂಧಿತ ಆರೋಪಿ.

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಂತ್ರಸ್ತ ಬಾಲಕಿಗೆ ಎರಡು ವರ್ಷಗಳ ಹಿಂದೆ ಸ್ನೇಹಿತೆಯ ಮದುವೆಯ ಸಂದರ್ಭ ಅಶ್ವತ್ಥ್ ನ ಪರಿಚಿತನಾಗುತ್ತಾನೆ. ಈ ವೇಳೆ ಇಬ್ಬರೂ ಮೊಬೈಲ್ ಸಂಖ್ಯೆಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ‌. ಇಬ್ಬರೂ ಮಾತನಾಡುತ್ತಾ ಸಲುಗೆ ಬೆಳೆಸಿಕೊಂಡಿರುತ್ತಾರೆ‌.

2021 ಜುಲೈನಲ್ಲಿ ಸಂತ್ರಸ್ತ ಬಾಲಕಿ ಅಶ್ವತ್ಥ್ ಮನೆಗೆ ಕಿನ್ನಿಗೋಳಿಗೆ ಹೋಗಿದ್ದಳು. ಈ ವೇಳೆ ಮಧ್ಯಾಹ್ನ 2.30ರ ಸುಮಾರಿಗೆ ಅಶ್ವತ್ಥ್ ಅಲ್ಲೇ ಪಕ್ಕದಲ್ಲಿರುವ ತನ್ನ ಅಣ್ಣನ ಬಾಲಕಿಯನ್ನು ಕರೆದೊಯ್ದು, ಯಾರೂ ಇಲ್ಲದ ವೇಳೆ ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸುತ್ತಾನೆ. 2021ರ ಅಕ್ಟೋಬರ್ 24 ರಂದು ಕಾಲೇಜಿಗೆ ರಜೆ ಇದ್ದ ಸಂದರ್ಭ ನೊಂದ ಬಾಲಕಿಯು ಅಶ್ವತ್ಥ್ ಮನೆಗೆ ಹೋಗಿದ್ದಳು. ಈ ವೇಳೆಯೂ ಅಶ್ವತ್ಥ್ ನೊಂದ ಬಾಲಕಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಮತ್ತೆ ದೈಹಿಕ ಸಂಪರ್ಕ ಬೆಳೆಸಿರುತ್ತಾನೆ.

ಪರಿಣಾಮ ಸಂತ್ರಸ್ತ ಬಾಲಕಿ ಗರ್ಭಿಣಿಯಾಗಿದ್ದು, ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿಯ ಕುಟುಂಬಸ್ಥರು ಪೊಲೀಸ್ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದಯ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article