
ಮದ್ಯವ್ಯಸನಿ ಪತಿಯ ಕಿರುಕುಳ ಸಹಿಸದೆ ಮರ್ಮಾಂಗವನ್ನೇ ಕತ್ತರಿಸಿ ಭೀಕರವಾಗಿ ಕೊಲೆಗೈದ ಪತ್ನಿ!
Wednesday, May 18, 2022
ಕೊಲ್ಹಾಪುರ(ಮಹಾರಾಷ್ಟ್ರ): ಮದ್ಯವ್ಯಸನಿ ಪತಿಯು ದಿನನಿತ್ಯ ನಡೆಸುತ್ತಿದ್ದ ಜಗಳದಿಂದ ಬೇಸತ್ತ ಪತ್ನಿ ಆತನನ್ನು ಭೀಕರವಾಗಿ ಕೊಲೆಗೈದಿರುವ ಕೃತ್ಯವೊಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಈಕೆ ಮದ್ಯದ ಅಮಲಿನಲ್ಲಿದ್ದ ವೇಳೆ ಪತಿಯ ಗುಪ್ತಾಂಗವನ್ನೇ ಕತ್ತರಿಸಿ ಕೊಲೆಗೈದಿದ್ದಾಳೆ.
ಕೊಲ್ಹಾಪುರದ ಶಾಹುವಾಡಿಯ ಮಂಗೂರವಾಡಿಯ ನಿವಾಸಿ ಪ್ರಕಾಶ್ ಪಾಂಡುರಂಗ ಕಾಂಬಳೆ (52) ಮೃತಪಟ್ಟ ವ್ಯಕ್ತಿ. ವಂದನಾ ಪ್ರಕಾಶ್ ಕಾಂಬಳೆ (50) ಕೊಲೆಗೈದಿರುವ ಮಹಿಳೆ.
ಪತಿಯ ಕೊಲೆಕೃತ್ಯ ನಡೆಸಿರುವ ಬೆನ್ನಲ್ಲೇ ಆರೋಪಿತೆ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದಾಳೆ. ಸದ್ತ ಪೊಲೀಸರು ವಂದನಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿದಾಗ ತಪ್ಪೊಪ್ಪಿಕೊಂಡಿದ್ದಾಳೆ.
ಪ್ರಕರಣದ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಪಾಟೀಲ್ ಪ್ರತಿಕ್ರಿಯೆ ನೀಡಿ, ಪ್ರಕಾಶ್ ಹಾಗೂ ಪತ್ನಿ ವಂದನಾ ಶಾಹುವಾಡಿ ತಾಲೂಕಿನ ನಿವಾಸಿಗಳಾಗಿದ್ದಾರೆ. ಕೆಲ ವರ್ಷಗಳಿಂದ ದಂಪತಿ ಗುತ್ತಿಗೆ ಆಧಾರದ ಮೇಲೆ ಜಮೀನೊಂದರಲ್ಲಿ ನೌಕರಿ ಮಾಡುತ್ತಿದ್ದರು. ಆದರೆ ದಿನನಿತ್ಯ ಪತಿ ಮದ್ಯಸೇವಿಸಿ ಬಂದು ಪತ್ನಿಯೊಂದಿಗೆ ಜಗಳ ಮಾಡುವುದರ ಜೊತೆಗೆ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ. ಇದೇ ರೀತಿ ಮೊನ್ನೆ ಮಧ್ಯರಾತ್ರಿ ಕೂಡ ಕಿರುಕುಳ ನೀಡಿದ್ದು, ಇದರಿಂದ ಆಕ್ರೋಶಗೊಂಡ ಪತ್ನಿ ವಂದನಾ, ಪತಿ ಪ್ರಕಾಶ್ ತಲೆಗೆ ಕಲ್ಲಿನಿಂದ ಹೊಡೆದಿದ್ದಾಳೆ. ಬಳಿಕ ಮರ್ಮಾಂಗ ಕತ್ತರಿಸಿ, ಬರ್ಬರವಾಗಿ ಕೊಲೆ ಮಾಡಿದ್ದಾಳೆಂದು ತಿಳಿಸಿದ್ದಾರೆ.