
Mangalore - 30 ವರ್ಷದ ಯುವತಿ ಜೊತೆ ಲವ್ ನಾಟಕ- ಮಾನಭಂಗ ಯತ್ನ, ಕೊನೆಗೆ ಕೊಲೆಗೂ ಯತ್ನ- ಶಿವರಾಜ್ ಕುಲಾಲ್ ಪೊಲೀಸ್ ಬಲೆಗೆ!
Wednesday, May 18, 2022
ಮಂಗಳೂರು: ಯುವತಿಯೊಂದಿಗೆ ಲವ್ವಿ - ಡವ್ವಿಯಲ್ಲಿದ್ದ ಯುವಕನೋರ್ವನು, ಇದೀಗ ಆಕೆಯ ಕೊಲೆಗೆ ಯತ್ನಿಸಿದ್ದಾನೆಂಬ ಆರೋಪದಲ್ಲಿ ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನ ಕಸಬ ಗ್ರಾಮದ ನಿವಾಸಿ ಶಿವರಾಜ್ ಕುಲಾಲ್(28) ಬಂಧಿತ ಆರೋಪಿ.
ನಗರದ ಹಳೆಯಂಗಡಿಯ ನಿವಾಸಿ ಅಶ್ವಿನಿ (30) ಎಂಬ ಯುವತಿಗೆ ಈ ಹಿಂದೆ ಬೇರೆ ವಿವಾಹವಾಗಿತ್ತು. ಆದರೆ ಆದರೆ ಆಕೆ ಪತಿಯಿಂದ ದೂರವಾಗಿದ್ದು, ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಈ ನಡುವೆ ಆಕೆ 2 ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ಶಿವರಾಜ್ ಕುಲಾಲ್ ನ ಪ್ರೀತಿಯ ಬಲೆಗೆ ಬಿದ್ದಿದ್ದಳು.
ಆದರೆ ಆರು ತಿಂಗಳ ಹಿಂದೆ ಶಿವರಾಜ್ ಕುಲಾಲ್ ಸಂತ್ರಸ್ತೆ ಅಶ್ವಿನಿಗೆ ಮಾನಸಿಕ ಹಿಂಸೆ ನೀಡಿ, ಮಾನಭಂಗಕ್ಕೆ ಯತ್ನಿಸಿದ್ದನೆಂದು ಆಕೆ ಆರೋಪಿಯಿಂದ ದೂರವಾಗಿದ್ದರು. ಆದರೆ ಮೇ 17ರಂದು ಸಂಜೆ 6.30ರ ಸುಮಾರಿಗೆ ಬಳ್ಳಾಲ್ ಬಾಗ್ ನಲ್ಲಿ ಸಂತ್ರಸ್ತೆ ಕೆಲಸ ಮುಗಿಸಿಕೊಂಡು ಹೊರಟಿದ್ದರು. ಈ ಸಂದರ್ಭ ಆರೋಪಿ ಶಿವರಾಜ್ ಕುಲಾಲ್ ಲಿಫ್ಟ್ ಬಳಿ ಕೈಹಿಡಿದೆಳೆದು ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದನೆಂದು ಆರೋಪಿಸಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಶಿವರಾಜ್ ಕುಲಾಲ್ ನನ್ನು ಬಂಧಿಸಿರುವ ಪೊಲೀಸರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.