ಪತ್ನಿಗೆ ಸೀರೆ ಉಡ್ಲಿಕೆ ಬರಲ್ಲ: ಬೇಸತ್ತ ಪತಿ ಆತ್ಮಹತ್ಯೆ!
ತನ್ನ ಪತ್ನಿಗೆ ಸರಿಯಾಗಿ ಸೀರೆ ಉಡುವುದಕ್ಕೆ ಬರುವುದಿಲ್ಲ ಎನ್ನುವ ಕಾರಣಕ್ಕೇ ಪತಿ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಗರದಲ್ಲಿ ನಡೆದಿದೆ.
ಇಲ್ಲಿನ ಮುಕುಂದ ನಗರದ ಸಮಾಧಾನ್ ಸಾಬ್ಲೆ(24) ಸೋಮವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಯುವುದಕ್ಕೆ ಮೊದಲು ಡೆತ್ ನೋಟ್ ಬರೆದಿಟ್ಟ ಸಾಬ್ಲೆ, ತನ್ನ ಆತ್ಮಹತ್ಯೆಗೆ ಕಾರಣವನ್ನು ಬಿಚ್ಚಿಟ್ಟಿದ್ದಾನೆ. ಆತನ ಸಾವಿಗೆ ಕಾರಣ ತಿಳಿದರೆ ಯಾರಾದರೂ ಶಾಕ್ ಆಗಬಹುದು.
“ನನ್ನ ಹೆಂಡತಿಗೆ ಸರಿಯಾಗಿ ಸೀರೆ ಉಡಲು ಬರುವುದಿಲ್ಲ, ನೆಟ್ಟಗೆ ನಡೆಯುವುದಕ್ಕೆ ಬರುವುದಿಲ್ಲ. ಇನ್ನು ನಾಲ್ಕು ಜನರ ಜೊತೆ ಮಾತನಾಡುವುದಕ್ಕೂ ಬರುವುದಿಲ್ಲ’ ಎಂದು ಆತ ತನ್ನ ಡೆತ್ ನೋಟ್‌ನಲ್ಲಿ ಬರೆದಿದ್ದಾನೆ.
