ಚಿನ್ವೀಶ್ ಕೊಟ್ಟಾರಿಗೆ "ಕರ್ನಾಟಕ ಪ್ರತಿಭಾ ರತ್ನ" ಗೌರವ ಪುರಸ್ಕಾರ

ಚಿನ್ವೀಶ್ ಕೊಟ್ಟಾರಿಗೆ "ಕರ್ನಾಟಕ ಪ್ರತಿಭಾ ರತ್ನ" ಗೌರವ ಪುರಸ್ಕಾರ





ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಉಡುಪಿಯಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರು ಅಶೋಕ ನಗರದ ಚಿನ್ವೀಶ್ ಕೊಟ್ಟಾರಿಗೆ ಪ್ರತಿಷ್ಠಿತ "ಕರ್ನಾಟಕ ಪ್ರತಿಭಾ ರತ್ನ" ಗೌರವ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.



ಚಿನ್ವೀಶ್ ಕೊಟ್ಟಾರಿ ಬಹುಮುಖ ಪ್ರತಿಭೆಯನ್ನು ಗೌರವಿಸಿ "ಕರ್ನಾಟಕ ಪ್ರತಿಭಾ ರತ್ನ" ಪುರಸ್ಕಾರ ನೀಡಿ ಗೌರವಿಸಲಾಯಿತು.



ಚಿನ್ವೀಶ್ ವರು ಮಂಗಳೂರಿನ ನ್ಯಾಯವಾದಿ ಚಂದ್ರಹಾಸ್ ಕೊಟ್ಟಾರಿ ಹಾಗೂ ಪ್ರೇಮಲತಾ ದಂಪತಿ ಪುತ್ರನಾಗಿದ್ದು, ಪ್ರಸ್ತುತ ಸೈಂಟ್ ಅಲೋಶಿಯಸ್ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.



ಚಿನ್ವೀಶ್ ಅವರ ಸಾಧನೆ ಹೆತ್ತವರು ಮತ್ತು ಬಂಧು-ಮಿತ್ರರಲ್ಲಿ ಸಂತಸ ಮೂಡಿಸಿದೆ. ಯುವ ಪ್ರತಿಭೆ ಇನ್ನಷ್ಟು ಸಾಧನೆ ಮಾಡಿ ನಾಡಿಗೆ ಕೀರ್ತಿ ತರಲಿ ಎಂದು ಅವರು ಹಾರೈಸಿದ್ದಾರೆ.