-->
ಮಂಗಳೂರಿನ ಬೆದ್ರದ ಯುವತಿಯನ್ನು ಲಾಡ್ಜ್ ನಲ್ಲಿ ನಿರಂತರ ಅತ್ಯಾಚಾರ- ನಗ್ನಚಿತ್ರ ತೆಗೆದು ಬ್ಲ್ಯಾಕ್ ಮೇಲ್- ಕೊನೆಗೂ ಸಿಕ್ಕಿಬಿದ್ದ ಆರೋಪಿ

ಮಂಗಳೂರಿನ ಬೆದ್ರದ ಯುವತಿಯನ್ನು ಲಾಡ್ಜ್ ನಲ್ಲಿ ನಿರಂತರ ಅತ್ಯಾಚಾರ- ನಗ್ನಚಿತ್ರ ತೆಗೆದು ಬ್ಲ್ಯಾಕ್ ಮೇಲ್- ಕೊನೆಗೂ ಸಿಕ್ಕಿಬಿದ್ದ ಆರೋಪಿ

ಮಂಗಳೂರು: ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ‌ ನಿರಂತರ ಅತ್ಯಾಚಾರ ಎಸಗಿ ಮಾದಕದ್ರವ್ಯ ನೀಡಿ ಆಕೆಯ ನಗ್ನ ಫೋಟೋಗಳನ್ನು ತೆಗೆದು 1.50 ಲಕ್ಷ ರೂ. ವಂಚಿಸಿರುವ ಕಾಮುಕನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲದ ತೊಕ್ಕೊಟ್ಟಿನ ಪೆರ್ಮನ್ನೂರು ಹಿದಾಯತ್ ನಗರ ನಿವಾಸಿ ಶಾನವಾಝ್(36) ಬಂಧಿತ ಕಾಮುಕ. 

ಮೂಡಬಿದಿರೆಯ ಸಂತ್ರಸ್ತ ಯುವತಿಗೆ ಕಾಮುಕ ಶಾನವಾಝ್ ನ ಪರಿಚಯವಾಗಿದೆ. ಆತ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಆತನ ಬಣ್ಣದ ಮಾತನ್ನು ನಂಬಿದ ಆಕೆ ತನ್ನ ಸರ್ವಸ್ವವನ್ನೂ ಧಾರೆಯೆರೆದಿದ್ದಾಳೆ. ಕಾಮುಕ ಶಾನವಾಝ್ ಸಂತ್ರಸ್ತ ಯುವತಿಯನ್ನು ನಗರದ  ವಿವಿಧ ಲಾಡ್ಜ್ ಗಳಲ್ಲದೆ ಪುಣೆ, ಮುಂಬೈಯ ವಿವಿಧ ಲಾಡ್ಜ್ ಗಳಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅದಲ್ಲದೆ ಸಂತ್ರಸ್ತೆಗೆ ಮಾದಕ ದ್ರವ್ಯವನ್ನು ಬಲವಂತವಾಗಿ ತಿನ್ನಿಸಿ ಆಕೆಯ ನಗ್ನ ಚಿತ್ರಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ಆ ಬಳಿಕ ಆಕೆಗೆ ಆ ಚಿತ್ರಗಳನ್ನು ತೋರಿಸಿ ಹಣವನ್ನು ಬೇಡಿಕೆಯಿಟ್ಟಿದ್ದಾನೆ. ಈ ಮೂಲಕ ಬೆದರಿಕೆಯೊಡ್ಡಿರುವ ಆರೋಪಿ ಆಕೆಯಿಂದ 1.50 ಲಕ್ಷ ರೂ. ಸುಲಿಗೆ ಮಾಡಿದ್ದನು.

ತಾನು ಮೋಸ ಹೋಗಿರುವುದು ತಿಳಿದ ತಕ್ಷಣ ಸಂತ್ರಸ್ತ ಯುವತಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಳ್ಳುವಂತೆ ಮಂಗಳೂರು ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಪ್ರಕರಣದ ತನಿಖೆಯನ್ನು ಕೈಗೊಂಡ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಇದೀಗ ಹೆಚ್ಚಿನ ತನಿಖೆಗೆ ಆರೋಪಿಯನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ನೊಂದ ಯುವತಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article