-->
ಅನ್ಯ ಪುರುಷನೊಂದಿಗೆ ಸಂಬಂಧದ ಶಂಕೆ: ಕಂಬಕ್ಕೆ ಕಟ್ಟಿಹಾಕಿ ರಾತ್ರಿಯಿಡೀ ಥಳಿಸಿರುವ ಪತಿ, ಕುಟುಂಬಸ್ಥರು

ಅನ್ಯ ಪುರುಷನೊಂದಿಗೆ ಸಂಬಂಧದ ಶಂಕೆ: ಕಂಬಕ್ಕೆ ಕಟ್ಟಿಹಾಕಿ ರಾತ್ರಿಯಿಡೀ ಥಳಿಸಿರುವ ಪತಿ, ಕುಟುಂಬಸ್ಥರು

ಬಿಲಾಸ್​ಪುರ್​: ಅನ್ಯ ಪುರುಷನೊಂದಿಗೆ ಸಂಬಂಧದ ಶಂಕೆಯಿಂದ ಪತಿ ಹಾಗೂ ಆತನ ಮನೆಯವರು ಮಹಿಳೆಯೊರ್ವರನ್ನು ಕಂಬಕ ಕಟ್ಟಿ ಹಾಕಿ ರಾತ್ರಿಯಿಡೀ ಥಳಿಸಿರುವ ಅಮಾನವೀಯ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. 

ದೀಪಕ್​ ರಾಮ್​ ಎಂಬಾತ ತನ್ನ ಪತ್ನಿಯನ್ನು ಕಂಬಕ್ಕೆ ಕಟ್ಟಿಹಾಕಿ ರಾತ್ರಿಯಿಡೀ ಥಳಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತಿಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪತಿ ದೀಪಕ್ ರಾಮ್ ನನ್ನು ಬಂಧಿಸಿದ್ದಾರೆ

ಈ ಕೃತ್ಯದಲ್ಲಿ ಕೇವಲ ಮಹಿಳೆಯ ಪತಿ ಮಾತ್ರವಲ್ಲ, ಆತನ ತಂದೆ ಸೇರಿದಂತೆ ಸಂಬಂಧಿಕರು ಭಾಗಿಯಾಗಿದ್ದರು ಎನ್ನಲಾಗಿದೆ. ಈ ಸದ್ಯ ಎಲ್ಲರನ್ನೂ ಬಂಧಿಸಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥಲಿತದಿಂದ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100