ಕೆಎಸ್ಆರ್ ಟಿಸಿ ಬಸ್ ಅಪಘಾತದಲ್ಲಿ ಬೈಕ್ ಸವಾರ ಯುವಕರಿಬ್ಬರು ಬಲಿ

ವಿಜಯನಗರ: ಕೆಎಸ್ಆರ್ ಟಿಸಿ  ಬಸ್ ಹಾಗೂ ಬೈಕ್ ನಡುವೆ ಸಂಭವಿಸಿರುವ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರರಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲೂಕಿನ ಗಾದಿಗನೂರು ಬಳಿ ನಡೆದಿದೆ.


ಅಪಘಾತದಲ್ಲಿ ಕಿರಣ್ (23) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವೆಂಕಟೇಶ (25) ಎಂಬಾತ ಆಸ್ಪತ್ರೆಗೆ ಸಾಗಿಸುವ ವೇಳೆ ಅಸುನೀಗಿದ್ದಾನೆ.

ಕೆಎಸ್ಆರ್ ಟಿಸಿ ಬಸ್ ಹೊಸಪೇಟೆಯಿಂದ ಬಳ್ಳಾರಿಗೆ ಕಡೆಗೆ ತೆರಳುತ್ತಿತ್ತು. ಬೈಕ್ ಸವಾರರು ಗಾದಿಗನೂರಿನ ಜಾತ್ರೆಗೆ ಹೋಗಿ ತಮ್ಮ ಸ್ವಗ್ರಾಮ ಕಾಕುಬಾಳುಗೆ ಬೈಕ್​ನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಮುಖಾಮುಖಿಯಾಗಿ ಬಸ್ ಹಾಗೂ ಬೈಕ್ ಢಿಕ್ಕಿಯಾಗಿ ಈ ಸಾವು ಸಂಭವಿಸಿದೆ. 

ಸ್ಥಳಕ್ಕೆ ಹೊಸಪೇಟೆಯ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದರು. ಈ ಬಗ್ಗೆ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu