
ಬಂಟ್ವಾಳ: 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು
Wednesday, May 18, 2022
ಬಂಟ್ವಾಳ: 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ವಿಟ್ಲ ಸಮೀಪದ ಅಳಿಕೆ ಎಂಬಲ್ಲಿ ನಡೆದಿದೆ.
ಅಳಿಕೆ ಗ್ರಾಮದ ಚಂದಾಡಿ ನಿವಾಸಿ ವಿನಯ್ ಹೆಗ್ಡೆ ಅನ್ವಿತಾ (14) ಮೃತ ವಿದ್ಯಾರ್ಥಿನಿ.
ಅನ್ವಿತಾಗೆ ಹಲವು ಸಮಯಗಳಿಂದ ಅಸ್ತಮಾ ರೀತಿಯ ಸಮಸ್ಯೆ ಇತ್ತು. ಪರಿಣಾಮ ಶೀತವಾದ ತಕ್ಷಣ ಉಸಿರಾಟದ ತೊಂದರೆ ಉಂಟಾಗುತ್ತಿತ್ತು. ಮಂಗಳವಾರ ರಾತ್ರಿಯೂ ಉಸಿರಾಟದ ತೊಂದರೆ ಉಂಟಾಗಿದೆ. ಎಂದಿನಂತೆ ಮನೆಯಲ್ಲಿದ್ದ ಔಷಧಿ ನೀಡಿದ್ದರು. ಆದರೆ ರಾತ್ರಿ 1 ಗಂಟೆ ಸುಮಾರಿಗೆ ಉಸಿರಾಡಲು ಕಷ್ಟವಾಗಿ ಮನೆಯಲ್ಲಿಯೇ ಮೃತಪಟ್ಟಿದ್ದಾಳೆ.
ಆ ಬಳಿಕ ವೈದ್ಯರು ಬಂದು ಪರಿಶೀಲಿಸಿದಾಗ ಬಾಲಕಿ ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ. ಬಾಲಕಿಯ ಸಾವು ಮನೆಯವರನ್ನು ದಿಗ್ಭ್ರಾಂತಗೊಳಿಸಿದೆ. ಅನ್ವಿತಾ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಸಾವಿನ ಕಾರಣ ಜೇಸೀಸ್ ಶಾಲೆಗೆ ಇಂದು ರಜೆ ನೀಡಲಾಗಿದೆ.