-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ವಿವಾಹ ಆಮಂತ್ರಣ ಪತ್ರಿಕೆ ಹಂಚಲು ಹೋದ ವಧುವನ್ನು ಅಪಹರಿಸಿ ಗ್ಯಾಂಗ್ ರೇಪ್: 20 ದಿನಗಳ ಬಳಿಕ ಪೋಷಕರನ್ನು ಸೇರಿದ ಯುವತಿ

ವಿವಾಹ ಆಮಂತ್ರಣ ಪತ್ರಿಕೆ ಹಂಚಲು ಹೋದ ವಧುವನ್ನು ಅಪಹರಿಸಿ ಗ್ಯಾಂಗ್ ರೇಪ್: 20 ದಿನಗಳ ಬಳಿಕ ಪೋಷಕರನ್ನು ಸೇರಿದ ಯುವತಿ

ಝಾನ್ಸಿ: ತನ್ನ ವಿವಾಹ ಆಮಂತ್ರಣ ಪತ್ರಿಕೆಯನ್ನು ಹಂಚಲು ಹೋಗಿದ್ದ ವಧುವನ್ನೇ ಅಪಹರಿಸಿರುವ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ, ಬೇರೆಯವರಿಗೂ ಆಕೆಯನ್ನು ನೀಡಿರುವ ಪೈಶಾಚಿಕ ಕೃತ್ಯವೊಂದು ಝಾನ್ಸಿ ನಗರದಲ್ಲಿ ನಡೆದಿದೆ. ಸುಮಾರು 20 ದಿವಸಗಳ ಬಳಿಕ ಆಕೆ ಅಜ್ಞಾತ ಸ್ಥಳದಿಂದ ತನ್ನ ಪೋಷಕರನ್‌ನು ಸೇರಿದ್ದಾಳೆ. ಆರೋಪಿಗಳ ವಿರುದ್ಧ ದೂರು ಇದೀಗ ದೂರು ದಾಖಲಾಗಿದೆ.

18 ವರ್ಷದ ಈ‌ ಸಂತ್ರಸ್ತೆಗೆ ಕುಟುಂಬಸ್ಥರು ಎಪ್ರಿಲ್ 21ರಂದು ಮದುವೆ ನಿಶ್ಚಯಿಸಿದ್ದರು. ಅದರಂತೆ ಯುವತಿ ತನ್ನ ಮದುವೆಯ ಪತ್ರಗಳನ್ನು ಹಂಚಲು ಎಪ್ರಿಲ್​ 18ರಂದು ತನ್ನ ಸ್ನೇಹಿತರ ಮನೆಗೆ ತೆರಳಿದ್ದಾಳೆ. ಆದರೆ ದಾರಿ ಮಧ್ಯೆ ತಡೆದ ಗ್ರಾಮದ ಮೂವರು ಯುವಕರು ಆಕೆಯನ್ನು ಅಪಹರಿಸಿದ್ದಾರೆ. ಆ ಬಳಿಕ ಹಲವು  ದಿನಗಳ ಕಾಲ ಅವರು ವಿವಿಧ ಅಜ್ಞಾತ ಸ್ಥಳಗಳಲ್ಲಿ ತನ್ನನ್ನು ಇಟ್ಟು ಅತ್ಯಾಚಾರ ನಡೆಸಿದ್ದಾರೆ. ಕೆಲವು ದಿನಗಳ ಕಾಲ ಝಾನ್ಸಿಯಲ್ಲಿ ರಾಜಕೀಯ ನಾಯಕನೊಬ್ಬನಿಗೆ ಒಪ್ಪಿಸಿದ್ದಾರೆ. ನನ್ನ ಇಚ್ಛೆಗೆ ವಿರುದ್ಧವಾಗಿ ಬೇರೊಬ್ಬರೊಂದಿಗೆ ಇರಲು ಮಧ್ಯಪ್ರದೇಶದ ದಾಟಿಯಾ ಗ್ರಾಮಕ್ಕೆ ಕಳುಹಿಸಿದರು ಎಂದು ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಸಂತ್ರಸ್ತೆ ದಾಟಿಯಾದಿಂದ ತನ್ನ ತಂದೆಯನ್ನು ಕರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿಂದ ಪೊಲೀಸರ ರಕ್ಷಣೆ ಪಡೆದಿದ್ದಾಳೆ. ಈ ವೇಳೆ ಯುವತಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಮಾರಾಟ ಮಾಡಿದವರ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ಪಡೆಯಲಾಗಿದೆ. ಈ ಕುರಿತು ಗಂಭೀರವಾಗಿ ತನಿಖೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತೆಹ್ರಾಲಿ ಸರ್ಕಲ್ ಆಫೀಸರ್ ಅನುಜ್ ಸಿಂಗ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article