ಸ್ವಿಚ್ ಬೋರ್ಡ್ ಒಳಗೆ ಕೈಹಾಕಿ ವಿದ್ಯುದಾಘಾತಕ್ಕೊಳಗಾದ 11ತಿಂಗಳ ಹಸುಗೂಸು ಮೃತ್ಯು!

ಯಳಂದೂರು: 11 ತಿಂಗಳ ಹಸುಗೂಸೊಂದು ವಿದ್ಯುತ್ ಸ್ವಿಚ್ ಬೋರ್ಡ್ ನೊಳಗೆ ಕೈ ಹಾಕಿದ ಪರಿಣಾಮ ವಿದ್ಯುತ್ ಆಘಾತಗೊಂಡು ಮೃತಪಟ್ಟಿರುವ  ಘಟನೆ ಯಳಂದೂರಿನ ವೈ.ಕೆ.ಮೋಳೆ ಗ್ರಾಮದದಲ್ಲಿ ಭಾನುವಾರ ಬೆಳಗ್ಗಿನ ಜಾವ ನಡೆದಿದೆ.

ವೈ.ಕೆ.ಮೋಳೆ ಗ್ರಾಮದ ನಿವಾಸಿ ರಂಗಸ್ವಾಮಿ ಹಾಗೂ ಲಕ್ಷ್ಮಿ ದಂಪತಿಯ ಪುತ್ರ ಗಗನ್ ಮೃತಪಟ್ಟ ಮಗು.

ರಾತ್ರಿ ಮಲಗಿದ್ದ ಮಗು ಭಾನುವಾರ ಬೆಳಗ್ಗೆ ಎಂದಿನಂತೆ ಎದ್ದು, ಅಲ್ಲಿಯೇ ಇದ್ದ ವಿದ್ಯುತ್ ಸ್ವಿಚ್ ಬೋರ್ಡ್ ನೊಳಗೆ ಕೈ ಹಾಕಿದೆ. ಪರಿಣಾಮ ಮಗುವಿಗೆ ಶಾಕ್ ಹೊಡಿದೆ. ಇದರಿಂದ ಮಗು ಕಿರುಚಲಾರಂಭಿಸಿದೆ. ತಕ್ಷಣ ಮಗುವಿನ ಚಿಕ್ಕಮ್ಮ ಮಗುವನ್ನು ಬಿಡಿಸಲು ಹೋಗಿ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ.

ತಕ್ಷಣ ಇಬ್ಬರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.