-->
ಪ್ರಿಯತಮೆಗಾಗಿ ಪರಿಚಿತರ ಮನೆಯಲ್ಲೇ ಕಳವುಗೈಯುತ್ತಿದ್ದ ಪ್ರಿಯಕರ ಅರೆಸ್ಟ್

ಪ್ರಿಯತಮೆಗಾಗಿ ಪರಿಚಿತರ ಮನೆಯಲ್ಲೇ ಕಳವುಗೈಯುತ್ತಿದ್ದ ಪ್ರಿಯಕರ ಅರೆಸ್ಟ್

ಬೆಂಗಳೂರು: ಪ್ರಿಯತಮೆಯನ್ನು ಸಂತೃಪ್ತಿಗೊಳಿಸಲು ಹಾಗೂ ಶೋಕಿಗಾಗಿ ಪರಿಚಯಸ್ಥರ ಮನೆಯಲ್ಲಿಯೇ ಕಳವುಗೈಯುತ್ತಿದ್ದ ಆರೋಪಿಯನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. 

ಕೆ.ಪಿ.ಅಗ್ರಹಾರ ನಿವಾಸಿ ನವೀನ್ ಕುಮಾರ್ (22) ಬಂಧಿತ ಆರೋಪಿ. ಬಂಧಿತನಿಂದ 4.90 ಲಕ್ಷ ರೂ. ಮೌಲ್ಯದ 109 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. 

ಆರೋಪಿ ನವೀನ್​ ಕುಮಾರ್ ಪರಿಚಯಸ್ಥ ಶಿವಶಂಕರಯ್ಯ ಎಂಬುವರ ಮನೆಯಲ್ಲಿ ಮಾರ್ಚ್ 28 ರಂದು ಕಳವು ಮಾಡಿದ್ದ. ಅಂದು ಶಿವಶಂಕರಯ್ಯರ ಪತ್ನಿ ನವೀನ್ ಮನೆಗೆ ಬಂದಿದ್ದರು. ಆಗ ಆಕೆ ನವೀನ್ ತಾಯಿಯೊಂದಿಗೆ ಮಾತನಾಡುತ್ತಾ ಮನೆಯಲ್ಲಿ ಯಾರು ಇಲ್ಲ ಬೀಗ ಹಾಕಿ ಬರುವುದನ್ನೂ ಮರೆತಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ನವೀನ್, ತಕ್ಷಣ ಶಿವಶಂಕರಯ್ಯ ಮನೆಗೆ ಹೋಗಿ ಮನೆಯ ಬೀರುವಿನಲ್ಲಿದ್ದ ಚಿನ್ನದ ಚೈನ್, ಕಿವಿಯೋಲೆ ಹಾಗೂ ಉಂಗುರ ಸೇರಿದಂತೆ 106 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. 

ಮನೆಯಲ್ಲಿ ಕಳವು ಆಗಿರುವ ಬಗ್ಗೆ ಶಿವಶಂಕರಯ್ಯ ದೂರು ನೀಡಿದ್ದರು. ಪಿಯುಸಿ ಓದಿದ್ದ ನವೀನ್ ಕುಮಾರ್ ಕೆಫೆ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲದೆ ಅತ್ತೆ ಮಗಳನ್ನು ಪ್ರೀತಿಸುತ್ತಿದ್ದ. ಕದ್ದ ಚಿನ್ನವನ್ನು ಮಾರಿ ಅತ್ತೆ ಮಗಳಿಗೆ ಹಣ ನೀಡಿದ್ದ. ಅಲ್ಲದೇ 27 ಗ್ರಾಂ ಚಿನ್ನವನ್ನು ಬ್ಯಾಂಕ್​ನಲ್ಲಿ ಇಟ್ಟಿದ್ದ. ಸಿಸಿಟಿವಿ ದೃಶ್ಯದ ಸುಳಿವು ಮೇರೆಗೆ ಆರೋಪಿಯನ್ನು ಪತ್ತೆ ಮಾಡಿದ ಕೆ.ಪಿ.ಅಗ್ರಹಾರ ಪೊಲೀಸರು ನವೀನ್​ ಕುಮಾರ್ ನನ್ನು ಜೈಲಿಗಟ್ಟಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article