-->
ಎಸ್ಎಸ್ಎಲ್ ಸಿ ಪರೀಕ್ಷೆ ಉತ್ತರ ಪತ್ರಿಕೆಯಲ್ಲಿ ಸದ್ದು ಮಾಡಿದ ‘ಪುಷ್ಪ: ದಿ ರೈಸ್’ ಸಿನಿಮಾ ತಗ್ಗೆದೆಲೆ ಡೈಲಾಗ್

ಎಸ್ಎಸ್ಎಲ್ ಸಿ ಪರೀಕ್ಷೆ ಉತ್ತರ ಪತ್ರಿಕೆಯಲ್ಲಿ ಸದ್ದು ಮಾಡಿದ ‘ಪುಷ್ಪ: ದಿ ರೈಸ್’ ಸಿನಿಮಾ ತಗ್ಗೆದೆಲೆ ಡೈಲಾಗ್

ಹೈದರಾಬಾದ್​: ‘ಪುಷ್ಪ: ದಿ ರೈಸ್’ ಸಿನಿಮಾ ಸೂಪರ್ ಹಿಟ್ ಆಗಿರೋದು ಎಲ್ಲರಿಗೂ ಗೊತ್ತಿದೆ. ಅದರ ಕೆಲವೊಂದು ಡೈಲಾಗ್‌ಗಳು ಹಾಗೂ ಸಿಗ್ನೇಚರ್​ ಸ್ಟೆಪ್ಸ್​ ರೀಲ್ಸ್ ಗಳ ಮೂಲಕ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್​ನಲ್ಲಿ ಈಗಲೂ ಇದೆ. ಅದರಲ್ಲೂ ಅಲ್ಲು ಅರ್ಜುನ್ ಅವರ ತಗ್ಗೆದೆಲೆ ಡೈಲಾಗ್​ ಮಾತ್ರ ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟುಹಾಕಿದೆ. ಜಗತ್ತಿನಾದ್ಯಂತ ಜನತೆ ಅದರ ಅನುಕರಣೆ ಮಾಡಿದ್ದಾರೆ. 

ಯುವಕರಿಂದ ಹಿಡಿದು ವೃದ್ಧರವರೆಗೂ ತೆಗ್ಗೆದೆಲೆ ಡೈಲಾಗ್​ ಹೊಡೆದು ಸಿಗ್ನೆಚರ್​ ಸ್ಟೈಲ್ ಕಾಪಿ ಮಾಡಿರುವುದನ್ನು ನಾವೆಲ್ಲ ನೋಡಿದ್ದೇವೆ. ಸಿನಿಮಾ ಬಿಡುಗಡೆಯಾಗಿ 4 ತಿಂಗಳುಗಳು ಕಳೆದರೂ ಸಿನಿಮಾ ಮೇಲಿನ ಕ್ರೇಜ್​ ಮಾತ್ರ ಇನ್ನು ಕಡಿಮೆಯಾಗಿಲ್ಲ. ಇದೀಗ ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲೂ ತೆಗ್ಗೆದೆಲೆ ಡೈಲಾಗ್​ ಸದ್ದು ಮಾಡಿದೆ. ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಉತ್ತರ ಬರೆಯುವ ಬದಲು ಪುಷ್ಪ ಸಿನಿಮಾ್ ಡೈಲಾಗ್​ ಅನ್ನು ತನ್ನದೇ ರೀತಿಯಲ್ಲಿ ಬರೆದಿದ್ದಾನೆ. 

'ಪುಷ್ಪ…ಪುಷ್ಪರಾಜ್​.. ಅಪುನ್​ ಲಿಖೇಗಾ ನಹಿ' ಎಂದು ಬರೆದಿದ್ದು, ನಾನು ಪರೀಕ್ಷೆ ಬರೆಯೋದೇ ಇಲ್ಲ ಎಂಬುದು ಅದರರ್ಥವಾಗಿದೆ. ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಫೋಟೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ಶಿಕ್ಷಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅನೇಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100