ಸರಿಯಾದ ಸಮಯಕ್ಕೆ ವರ ಮಂಟಪಕ್ಕೆ ಬರಲಿಲ್ಲವೆಂದು ಬೇರೆಯವನ ಕೈ ಹಿಡಿದ ವಧು

ಮುಂಬೈ: ಮುಹೂರ್ತದ ಸಮಯಕ್ಕೆ ಸರಿಯಾಗಿ ವರ ಬರಲಿಲ್ಲವೆಂದು ವಧು ಬೇರೊಬ್ಬನೊಂದಿಗೆ ವಿವಾಹವಾಗಿರುವ ಘಟನೆಯೊಂದು ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ. 

ಈ ಮದುವೆ ಸಮಾರಂಭವು ಎಪ್ರಿಲ್​ 22ರಂದು ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್​ ಪಂಗ್ರಾ ಗ್ರಾಮದಲ್ಲಿ. ಮದುವೆಗಾಗಿ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು. ಸಂಜೆ 4 ಗಂಟೆಗೆ ಮದುವೆ ಮುಹೂರ್ತವಿತ್ತು. ಆದರೆ, ಮುಹೂರ್ತದ ಸಮಯವಾದರೂ ವರ ಮಾತ್ರ ಬರಲೇ ಇಲ್ಲ. ವಧು ಹಾಗೂ ಆಕೆಯ ಕುಟುಂಬ ಸಾಕಷ್ಟು ಕಾದರೂ ಮದುಮಗನ ಪತ್ತೆಯೇ ಇರಲಿಲ್ಲ. 

ಸಮಯ 8 ಗಂಟೆಯಾದರೂ ಮದುಮಗ ಮಾತ್ರ ಬರಲೇ ಇಲ್ಲ. ನೋಡುವವರೆಗೆ ನೋಡಿದ ವಧುವಿನ ತಂದೆ ಕೊನೆಗೆ ತಮ್ಮ ಸಂಬಂಧಿಕರೊಬ್ಬರೊಂದಿಗೆ ಪುತ್ರಿಯ ವಿವಾಹವನ್ನು ಅದೇ ಮಂಟಪದಲ್ಲಿ ನೆರವೇರಿಸಿದ್ದಾರೆ.

ವರನಿಗಾಗಿ 8 ಗಂಟೆಯವರೆಗೂ ಕಾದರೂ ಆತನ ಪತ್ತೆಯಿರಲಿಲ್ಲ. ಆ ಬಳಿಕ ಮದುವೆ ಮಂಟಪಕ್ಕೆ ಆಗಮಿಸಿದ ವರ ಪಾನಮತ್ತನಾಗಿದ್ದ. ತನ್ನ ಸ್ನೇಹಿತರ ಜತೆ ಸೇರಿಕೊಂಡು ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸಿ ಮದ್ಯದ ಅಮಲಿನಲ್ಲೇ ಮಂಟಪಕ್ಕೆ ಬಂದಿದ್ದ. 4 ಗಂಟೆಯ ಬದಲು 8 ಗಂಟೆಗೆ ಬಂದಿದ್ದಲ್ಲದೆ, ನಮ್ಮೊಂದಿಗೆ ಜಗಳ ಆಡಲು ಆರಂಭಿಸಿದ. ಯಾಕೋ ಇದು ಸರಿಯಿಲ್ಲ ಅಂದುಕೊಂಡು ನಮ್ಮ ಸಂಬಂಧಿಕರಲ್ಲಿ ಒಬ್ಬರಿಗೆ ಪುತ್ರಿಯನ್ನು ಕೊಟ್ಟು ಅದೇ ಮಂಟಪದಲ್ಲಿ ಮದುವೆ ಮಾಡಿಕೊಟ್ಟೆವು ಎಂದು ವಧುವಿನ ತಂದೆ ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu