-->
ಕುವೆಂಪು 'ಮಂತ್ರಮಾಂಗಲ್ಯ'ವನ್ನೇ ಸಾಕ್ಷಿಯಾಗಿರಿಸಿ ನಡೆಯಿತು ಮಂಗಳೂರಿನಲ್ಲೊಂದು ವಿಶಿಷ್ಟ ಮದುವೆ... ಕನ್ನಡದಲ್ಲಿ ಪ್ರತಿಜ್ಞೆಯೊಂದಿಗೆ ನವ ಜೀವನ ಆರಂಭ

ಕುವೆಂಪು 'ಮಂತ್ರಮಾಂಗಲ್ಯ'ವನ್ನೇ ಸಾಕ್ಷಿಯಾಗಿರಿಸಿ ನಡೆಯಿತು ಮಂಗಳೂರಿನಲ್ಲೊಂದು ವಿಶಿಷ್ಟ ಮದುವೆ... ಕನ್ನಡದಲ್ಲಿ ಪ್ರತಿಜ್ಞೆಯೊಂದಿಗೆ ನವ ಜೀವನ ಆರಂಭ

ಮಂಗಳೂರು: ಇತ್ತೀಚೆಗೆ ಮದುವೆಗಳೆಂದರೆ ಅದ್ಧೂರಿತನವೇ ಕಂಡು ಬರುತ್ತಿದೆ. ಆದರೆ, ಮಂಗಳೂರಿನಲ್ಲಿ ಕುವೆಂಪು ಅವರ 'ಮಂತ್ರಮಾಂಗಲ್ಯ'ವನ್ನು ಸಾಕ್ಷೀಕರಿಸಿ ಸರಳ ಮದುವೆಯೊಂದು ನಡೆದಿದ್ದು,  ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವೈದಿಕ ಆಚರಣೆಗಳಿಲ್ಲದೆ, ಹೋಮ ಹವನಾದಿ, ಪೂಜೆ, ಮಂತ್ರಘೋಷಗಳಿಲ್ಲದೆ ಮಂತ್ರಮಾಂಗಲ್ಯದ ಮೂಲಕ ಸರಳವಾಗಿ ವಿವಾಹವಾಗಿ ಕಡಲತಡಿಯ ಜೋಡಿಯೊಂದು ಗಮನ ಸೆಳೆದಿದೆ. ನಗರದ ಸುರತ್ಕಲ್​ನಲ್ಲಿನ ಹೋಂಸ್ಟೇಯಲ್ಲಿ ವಿವೇಕ ಗೌಡ ಹಾಗೂ ಶಿವಾನಿ ಶೆಟ್ಟಿ ಎಂಬುವವರು ನಾಡಗೀತೆ, ಪರಿಸರ ಸ್ನೇಹಿ ವಿಚಾರಗಳನ್ನು ಪಾಲನೆ ಮಾಡಿಕೊಂಡು ಹೊಸಜೀವನ ಆರಂಭಿಸಿದ್ದಾರೆ. 

ಲ್ಯಾಂಡ್ ಲಿಂಕ್ಸ್​ ನಿವಾಸಿ ವಿವೇಕಗೌಡ ಛಾಯಾಗ್ರಾಹಣ ಹಾಗೂ ವೀಡಿಯೋ ಎಡಿಟಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಶಿವಾನಿ ಶೆಟ್ಟಿಯವರು ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಈ ಜೋಡಿ ಮಂತ್ರಮಾಂಗಲ್ಯದ ಮೂಲಕ ಸರಳವಾಗಿ ಮದುವೆಯಾಯಿತು. ವಿವಾಹ ಸಮಾರಂಭದಲ್ಲಿ ಕೇವಲ 100 ಮಂದಿಗೆ ಮಾತ್ರ ಆಹ್ವಾನವಿತ್ತು. ಬಂದವರೆಲ್ಲರೂ ಮದುವೆಯಲ್ಲಿ ಭಾಗವಹಿಸುವ ಜೊತೆಗೆ ಆದರ್ಶಗಳನ್ನು ಮೈಗೂಡಿಸುವಂತಾಗಿದೆ. 


ವಧೂ - ವರರು ತಾವು ಪರಸ್ಪರ ಅರ್ಥಮಾಡಿಕೊಂಡು ಸಹಬಾಳ್ವೆ ನಡೆದುಕೊಳ್ಳುವ ಬಗ್ಗೆ ಕನ್ನಡದಲ್ಲಿ ಪ್ರತಿಜ್ಞೆ ತೆಗೆದುಕೊಂಡರು. ಬಳಿಕ ಹಾರ ಬದಲಾವಣೆ ಮಾಡಿಕೊಂಡು, ತಾಳಿ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಚಿಂತಕ ವಿವೇಕಾನಂದ ಎಚ್.ಕೆ.ಯವರು ವಿವಾಹ ಕಾರ್ಯ ನಡೆಸಿಕೊಟ್ಟಿದ್ದಾರೆ.

ವರ ವಿವೇಕ್ ಗೌಡ ಅವರು ಬಸವಣ್ಣ, ಕುವೆಂಪು ಆದರ್ಶ, ಚಿಂತನೆಗಳನ್ನು ಪಾಲಿಸಿಕೊಂಡು ಮೈಗೂಡಿಸಿಕೊಂಡವರು. ಕುವೆಂಪು ಅವರು ಪ್ರತಿಪಾದಿಸಿರುವ ಮಂತ್ರಮಾಂಗಲ್ಯದ ಮೂಲಕ‌ ಮದುವೆಯಾಗಿ ನಾಡಗೀತೆ ಹಾಡುವ ಮೂಲಕ ವಿಶಿಷ್ಟತೆ ಮೆರೆದಿದ್ದಾರೆ. ಅಲ್ಲದೆ, ಮದುವೆಗೆ ಬಂದವರೆಲ್ಲರೂ ನಾಡಗೀತೆಯನ್ನು ಹಾಡಿಸಿದರು. ನಾಡಗೀತೆಯ ಅರ್ಥವನ್ನು ರೂಢಿಗೆ ತರುವ ಮೂಲಕ ಸೌರ್ಹಾರ್ದತೆ ನೆಲೆಸಬೇಕು ಎಂಬುವುದು ವಿವೇಕ್ ಗೌಡ ಆಶಯ.

ಈ ಮದುವೆ ಆಡಂಬರವಿಲ್ಲದೆ, ವ್ಯರ್ಥ ಖರ್ಚಿಲ್ಲದೆ ಸರಳವಾಗಿ ಜರುಗಿತು. ಸಂಪೂರ್ಣ ಮದುವೆಯಲ್ಲಿ ಪರಿಸರಕ್ಕೆ ಹಾನಿಕಾರಕವೆನಿಸುವ ವಸ್ತುಗಳ ಬಳಕೆಯಿರಲಿಲ್ಲ. ಪರಿಸರಕ್ಕೆ ಪೂರಕವಾಗಿರುವ ವೇದಿಕೆಯ ಅಲಂಕಾರವನ್ನು ವಧು ಶಿವಾನಿ ಅವರೇ ಸಿದ್ಧ ಪಡಿಸಿದ್ದರು. ವಧೂ-ವರರಿಗೆ ಅಕ್ಷತೆ ಹಾಕಲು ಅಕ್ಕಿಯ ಬದಲು ಹೂವುಗಳ ಎಸಳುಗಳನ್ನು ಬಳಸಲಾಯಿತು. ಅಲ್ಲದೆ, ಆಹಾರ ಪೋಲು ಮಾಡದಂತೆ ಪ್ರತಿಜ್ಞೆಯನ್ನು ಸಹ ಮಾಡಲಾಯಿತು. ಮದುವೆಗೆ ಬಂದವರಿಗೆ ಸಸ್ಯಹಾರಿ,‌ ಮಾಂಸಹಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಊಟಕ್ಕೂ ಮೊದಲು ಜೀವನದಲ್ಲಿ ಅನ್ನ ಪೋಲು ಮಾಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಪಡೆದುಕೊಂಡದ್ದು ವಿಶಿಷ್ಟವಾಗಿತ್ತು. ಪ್ಲಾಸ್ಟಿಕ್ ಲೋಟದ ಬದಲಿಗೆ ಸ್ಟೀಲ್ ಲೋಟಗಳ ವ್ಯವಸ್ಥೆ ಮಾಡಲಾಗಿತ್ತು.Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay RS 100

  

Advertise under the article