-->

ಮಂಗಳೂರು ಮೂಲದ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಎಲ್ವೀರಾ ಬ್ರಿಟ್ಟೋ ಅಸ್ತಂಗತ

ಮಂಗಳೂರು ಮೂಲದ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಎಲ್ವೀರಾ ಬ್ರಿಟ್ಟೋ ಅಸ್ತಂಗತ

ಮಂಗಳೂರು ಮೂಲದ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಎಲ್ವೀರಾ ಬ್ರಿಟ್ಟೋ ಅಸ್ತಂಗತ





60ರ ದಶಕದಲ್ಲಿ ಹಾಕಿ ರಂಗದಲ್ಲಿ ಧ್ರುವತಾರೆಯಂತೆ ಮಿನುಗಿದ ಮಂಗಳೂರು ಮೂಲದ ಎಲ್ವೀರಾ ಬ್ರಿಟ್ಟೋ ನಿಧನರಾಗಿದ್ದಾರೆ. ಮಹಿಳಾ ಹಾಕಿ ತಂಡದ ನಾಯಕಿಯಾಗಿ ಹಲವು ವರ್ಷಗಳ ಕಾಲ ಹಾಕಿ ತಂಡವನ್ನು ಮುನ್ನಡೆಸಿದ್ದ ಎಲ್ವೀರಾ ಮೂಲತಃ ಕರ್ನಾಟಕದ ಮಂಗಳೂರಿನವರು.



1966ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿರುವ ಅವರು, ಆ ಕಾಲದಲ್ಲಿ ಅತಿ ಕಿರು ಅವಧಿಯಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು. ಅಷ್ಟೇ ಅಲ್ಲ, ಅರ್ಜುನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಕ್ರೀಡಾಪಟುವಾಗಿದ್ದರು.



ಮೈಸೂರು (ಆಗ ರಾಜ್ಯ ತಂಡ) ಹಾಕಿ ತಂಡವನ್ನು ಮುನ್ನಡೆಸಿದ್ದ ಎಲ್ವೀರಾ ತಂಡವನ್ನು 1960-1967ರ ಅವಧಿಯಲ್ಲಿ ಸತತ ಎಂಟು ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್‌ ಆಗಿ ಮೆರೆಸಿದ್ದರು.



ಬೆಂಗಳೂರಿನಲ್ಲಿ ವಯೋಸಹಜ ಕಾಯಿಲೆಯಿಂದ 81ರ ಹರೆಯದಲ್ಲಿ ಅವರು ನಿಧನರಾದರು. ಎಲ್ವೀರಾ ಅವರ ಸಹೋದರಿಯರಾದ ರಿಯಾ ಬ್ರಿಟ್ಟೋಹಾಗೂ ಮಾಯಿ ಬ್ರಿಟ್ಟೋ ಕೂಡ ಆ ಕಾಲದಲ್ಲಿ ಮುಂಚೂಣಿ ಹಾಕಿ ಪಟುಗಳಾಗಿದ್ದರು.



ರಾಷ್ಟ್ರೀಯ ಹಾಕಿ ಆಯ್ಕೆ ಮಂಡಳಿಯ ಸರ್ಕಾರಿ ಪ್ರತಿನಿಧಿಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಎಲ್ವೀರಾ ಕೊಡುಗೈ ದಾನಿಯೂ ಆಗಿದ್ದರು.



ನೆಹರೂ ಮೈದಾನ ಎಂಬ ಕ್ರೀಡಾ ಷರತ್ತಿನ ಜಾಗ:

ಅವರ ಮನೆತನ ನೀಡಿದ್ದ ಜಾಗದಲ್ಲಿ ಮಂಗಳೂರಿನ ನೆಹರೂ ಮೈದಾನ ಇದೆ ಎನ್ನುವುದು ಉಲ್ಲೇಖಾರ್ಹ. ಈ ಜಾಗವನ್ನು ಕೇವಲ ಕ್ರೀಡೆಗೋಸ್ಕರ ಮೀಸಲಿಡಬೇಕು ಎಂಬ ಷರತ್ತಿನೊಂದಿಗೆ ವಿಶಾಲವಾದ ಭೂಮಿಯನ್ನು ಎಲ್ವೀರಾ ಕುಟುಂಬ ದೇಶಕ್ಕೆ ಸಮರ್ಪಿಸಿತ್ತು. ಮಂಗಳೂರಿನ ಏಕೈಕ ಕ್ರಿಕೆಟ್ ಮತ್ತು ಫುಟ್ಬಾಲ್ ಮೈದಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಮೈದಾನ ಹಲವು ರಾಜಕೀಯ ಸಮಾವೇಶಗಳಿಗೂ ಸಾಕ್ಷಿಯಾಗಿದೆ.



ಆದರೆ, ಈ ಮೈದಾನದ ವಿಸ್ತಾರವಾದ ಒಂದು ಭಾಗ ಈಗ ಖಾಸಗಿ ಬಸ್ ನಿಲ್ದಾಣ ಮತ್ತು ಒಣ ಮೀನು ಮಾರುಕಟ್ಟೆಯಾಗಿದೆ. ಈ ಸ್ಥಳ ಹಾಕಿ ಗ್ರೌಂಡ್‌ ಆಗಿತ್ತು.


ಇನ್ನು ಒಂದಷ್ಟು ಜಾಗ ಪಬ್ಲಿಕ್ ಟಾಯ್ಲೆಟ್ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಮೀಸಲಿಡಲಾಗಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article