
ಇಳಿಜಾರಿನಲ್ಲಿ ಅಪಘಾತಕ್ಕೀಡಾದ 90 ಜನರು ಪ್ರಯಾಣಿಕರಿದ್ದ ಬಸ್: ಮುಂದೇನಾಯ್ತು ಗೊತ್ತೇ?
4/16/2022 08:18:00 PM
ಚಾಮರಾಜನಗರ: ಪ್ರಯಾಣಿಕರನ್ನು ತುಂಬಿಸಿಕೊಂಡು ಬರುತ್ತಿದ್ದ ಬಸ್ಸೊಂದು ಬೆಟ್ಟದ ಇಳಿಜಾರಿನಲ್ಲಿ ಅಪಘಾತಕ್ಕೀಡಾದ ಪ್ರಸಂಗವೊಂದು ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟದ ಚೈನ್ ಗೇಟ್ ಬಳಿ ನಡೆದಿದೆ.
ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದಲ್ಲಿನ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರನ್ನು ಸರಕಾರಿ ಬಸ್ಸೊಂದು ವಾಪಸ್ ಕರೆದೊಯ್ಯುತ್ತಿತ್ತು. ಆದರೆ ಮಾರ್ಗಮಧ್ಯೆ ಬೆಟ್ಟದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತಕ್ಕೀಡಾಗಿ ಮರವೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಸುಮಾರು 90 ಮಂದಿ ಪ್ರಯಾಣಿಕರಿದ್ದ ಈ ಬಸ್ ಅಪಘಾತಕ್ಕೀಡಾಗಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಾದ ಪದ್ಮಮ್ಮ, ವೆಂಕಟಲಕ್ಷ್ಮಮ್ಮ ಅವರನ್ನು ಯಳಂದೂರು ಆಸ್ಪತ್ರೆಗೆ ದಾಖಲಿಸಲಾಗಿದೆ.