
ಮಂಗಳೂರು: ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಿಗೆ ಮಂಗಳೂರಿನ ಮೊಗವೀರ ಭಕ್ತರಿಂದ 50 ಪವನ್ ತೂಕದ ಚಿನ್ನದ ಬಂಗುಡೆ ಮೀನಿನ ಹಾರ ಸಮರ್ಪಣೆ
4/07/2022 07:34:00 AM
ಮಂಗಳೂರು: ನೂತನವಾಗಿ ಮರು ನಿರ್ಮಾಣಗೊಂಡಿರುವ ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಮನೆ ಮಾಡಿದೆ. ಇದೀಗ ಶ್ರೀ ಮಹಾಲಕ್ಷ್ಮಿ ದೇವಿಗೆ ಮಂಗಳೂರಿನ ಮೊಗವೀರ ಭಕ್ತರು ಬಂಗುಡೆ ಮೀನಿನ ಬಂಗಾರದ ಹಾರವನ್ನು ಸಮರ್ಪಣೆ ಮಾಡಿದ್ದಾರೆ.
ಬರೋಬ್ಬರಿ 400 ಗ್ರಾಂ ತೂಕವುಳ್ಳ 50 ಪವನ್ ನ ಬಂಗಾರದ ಬಂಗುಡೆ ಮೀನಿನ ಹಾರವನ್ನು ಮೊಗವೀರ ಭಕ್ತರು ಸಮರ್ಪಿಸಿದ್ದಾರೆ. ಕರಾವಳಿಯಲ್ಲಿ ಬಂಗುಡೆ ಮೀನಿಗೆ ಭಾರೀ ಬೇಡಿಕೆಯಿದೆ. ಇದೀಗ ಮೊಗವೀರ ಭಕ್ತರು ಇದೇ ಮೀನನ್ನು ಹೋಲುವ ಬಂಗಾರದ ಹಾರವನ್ನು ಮಹಾಲಕ್ಷ್ಮಿ ದೇವಿಗೆ ಸಮರ್ಪಿಸಿದ್ದಾರೆ.
ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಕಾಪು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನ ನಿರ್ಮಾಣ ಕಾರ್ಯ ಇತ್ತೀಚೆಗೆ ನಡೆದಿತ್ತು. ಇದೀಗ ದೇವಸ್ಥಾನದಲ್ಲಿ ವೈಭವದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ.