ದರ್ಬನ್: ದಕ್ಷಿಣ ಆಫ್ರಿಕಾದ ದರ್ಬನ್ನಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದ ಇಡೀ ಪ್ರದೇಶವೇ ಜಲಾವೃತಗೊಂಡಿದ್ದು, 440ಕ್ಕೂ ಅಧಿಕ ಮಂದಿ ನೀರು ಪಾಲಾಗಿರುವ ಬಗ್ಗೆ ವರದಿಯಾಗಿದೆ. 
ದಕ್ಷಿಣ ಆಫ್ರಿಕಾದ ದರ್ಬನ್ ನಲ್ಲಿ ಕಳೆದ ವಾರ ಸಂಭವಿಸಿರುವ ಭೀಕರ ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಹಲವಾರು ಸಾವು-ನೋವುಗಳು ಸಂಭವಿಸಿದೆ. ಮಳೆ ಅಬ್ಬರ ಇನ್ನೂ ಮುಂದುವರಿದಿದ್ದು, ಮತ್ತೆ ಪ್ರವಾಹ ಭೀತಿ ಎದುರಾಗಲಿದೆ ಎಂದು ಇಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. 
ಭಾರೀ ಬಿರುಗಾಳಿಗೆ ಹಲವಾರು ಮನೆಗಳು ಕೊಚ್ಚಿಹೋಗಿದೆ. ರಸ್ತೆ, ವಿದ್ಯುತ್ ಸಂಪರ್ಕಗಳಿಲ್ಲದೆ, ಆಹಾರವಿಲ್ಲದೆ  ಜನರು ಪರದಾಡುವಂತಾಗಿದೆ. 2019ರಲ್ಲಿ ಸಂಭವಿಸಿದ ಪ್ರವಾಹದಲ್ಲಿ 88ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
 
   
 
 
 
 
 
 
 
 
 
 
 
 
 
 
 
 
 
