-->
OP - Pixel Banner ad
'ಎ.26ರಂದು ನನ್ನ ವಿವಾಹ, ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗು': ಪ್ರೇಯಸಿಯಿಂದ ಪ್ರೇಮಿಗೆ 10 ರೂ. ನೋಟಿನಲ್ಲಿ ಸಂದೇಶ!

'ಎ.26ರಂದು ನನ್ನ ವಿವಾಹ, ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗು': ಪ್ರೇಯಸಿಯಿಂದ ಪ್ರೇಮಿಗೆ 10 ರೂ. ನೋಟಿನಲ್ಲಿ ಸಂದೇಶ!

ಹೈದರಾಬಾದ್​: ಯುವತಿಯೋರ್ವಳು ತನ್ನ ಪ್ರೇಮಿಗೆ 10 ರೂ. ನೋಟಿನಲ್ಲಿ ಬರೆದು ರವಾನಿಸಿರುವ ಪ್ರೇಮ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದ್ದು, ನೆಟ್ಟಿಗರಿಂದ ಇದಕ್ಕೆ ವಿವಿಧ ರೀತಿಯ ಅಭಿಪ್ರಾಯ ಬರುತ್ತಿದೆ. 

ಇದು ಕುಸುಮ್ ಎಂಬ ಯುವತಿ ತನ್ನ  ಪ್ರಿಯಕರ ವಿಶಾಲ್​ಗೆ ಈ ಸಂದೇಶವನ್ನು ಬರೆದಿದ್ದಾಳೆ. ಆಕೆ ನೋಟಿನಲ್ಲಿ ''ವಿಶಾಲ್, ಮೇರಿ ಶಾದಿ ಎಪ್ರಿಲ್​​ 26ಕೋ ಹೈ. ಮುಝೇ ಭಾಗ್ ಕೇ ಲೇ ಜಾನಾ. ತುಮ್ಹಾರಿ ಕುಸುಮ್'(ವಿಶಾಲ್​ ನಾನು ಎಪ್ರಿಲ್​ 26ರಂದು ಮದುವೆಯಾಗುತ್ತಿದ್ದೇನೆ. ದಯವಿಟ್ಟು ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನ್ನ ಕುಸುಮ್​) ಎಂದು ಬರೆದಿದ್ದಾಳೆ. 

ಇದೀಗ ಈ ನೋಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಅನೇಕರು ಲೈಕ್ ಮಾಡಿದ್ದು, ವಿವಿಧ ತರಹದ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242