-->

ಚಿಕನ್ ಸ್ಟಾಲ್ ನಲ್ಲಿ ‌'ಸನ್ನಿ ಲಿಯೋನ್ ಅಭಿಮಾನಿಗಳಿಗೆ' 10% ವಿಶೇಷ ರಿಯಾಯಿತಿ

ಚಿಕನ್ ಸ್ಟಾಲ್ ನಲ್ಲಿ ‌'ಸನ್ನಿ ಲಿಯೋನ್ ಅಭಿಮಾನಿಗಳಿಗೆ' 10% ವಿಶೇಷ ರಿಯಾಯಿತಿ

ಮಂಡ್ಯ: ಸಾಮಾನ್ಯವಾಗಿ ಅಂಗಡಿ ಮಳಿಗೆಗಳಲ್ಲಿ ರಿಯಾಯಿತಿ  ನೀಡುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಆದರೆ ಇಲ್ಲೊಬ್ಬ ನೀಲಿ ಚಿತ್ರತಾರೆ ಸನ್ನಿ ಲಿಯೋನ್​ನ ಅಭಿಮಾನಿಯೊಬ್ಬ ಮಂಡ್ಯದಲ್ಲಿ ವರ್ಷಪೂರ್ತಿ ವಿಶೇಷ ಆಫರ್​ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. 

ಮಂಡ್ಯ ಜಿಲ್ಲೆಯ ಕರ್ನಾಟಕ ಬಾರ್​ ವೃತ್ತದಲ್ಲಿ ಚಿಕನ್​ ಅಂಗಡಿ ಇಟ್ಟುಕೊಂಡಿರುವ ಪ್ರಸಾದ್​ ಎಂಬ ಯುವಕ ನಟಿ ಸನ್ನಿ ಲಿಯೋನ್​ ಅವರ ಕಟ್ಟಾ ಅಭಿಮಾನಿ. ಆದ್ದರಿಂದ ಅವರು ತಮ್ಮ ಮಳಿಗೆಗೆ ಬಂದು ಚಿಕನ್​ ಖರೀದಿಸುವ ಸನ್ನಿ ಲಿಯೋನ್​ ಅಭಿಮಾನಿಗಳಿಗೆ ಶೇ.10 ಡಿಸ್ಕೌಂಟ್​ ಕೊಡುವುದಾಗಿ ಮಾಹಿತಿ ಫಲಕ ಹಾಕಿಕೊಂಡಿದ್ದಾರೆ. 

ಆದರೆ ಪ್ರಸಾದ್ ಅವರ ಮಳಿಗೆ ಬಂದು ವೃಥಾ ಸುಮ್ಮನೆ  ಸನ್ನಿ ಲಿಯೋನ್ ಅಭಿಮಾನಿ ಎಂದರೆ ರಿಯಾಯಿತಿ ಸಿಗುವುದಿಲ್ಲ. ಬದಲಿಗೆ ಅವರು ಮೂರು ಪ್ರಮುಖ ಷರತ್ತು ಪೂರೈಸಬೇಕು. ಸಾಮಾಜಿಕ ಜಾಲತಾಣ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್​ ಅವರನ್ನು ಫಾಲೋ ಮಾಡುತ್ತಿರಬೇಕು. ತಮ್ಮ ಮೊಬೈಲ್​ಗಳಲ್ಲಿ ನಟಿಯ ಕನಿಷ್ಠ 10 ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು. ಅವರ ಎಲ್ಲ ಫೋಟೊಗಳಿಗೂ ಮೆಚ್ಚುಗೆ ಹಾಗೂ ಕಾಮೆಂಟ್​ ಮಾಡಿರಬೇಕೆಂದು ಷರತ್ತು ಹಾಕಲಾಗಿದೆ. ಇಷ್ಟನ್ನು ಪರಿಶೀಲಿಸಿ ಖಚಿತವಾದ ಬಳಿಕ ಡಿಸ್ಕೌಂಟ್​ ನೀಡಲಾಗುತ್ತದೆ. ಸದ್ಯ ಈ ಫಲಕ ವೈರಲ್​ ಆಗುತ್ತಿದೆ. 

Ads on article

Advertise in articles 1

advertising articles 2

Advertise under the article