-->
ಬಸ್ ನಲ್ಲೇ ಬಿಯರ್‌ ಕುಡಿದ ವಿದ್ಯಾರ್ಥಿನಿಯರು: ವೀಡಿಯೋ ವೈರಲ್

ಬಸ್ ನಲ್ಲೇ ಬಿಯರ್‌ ಕುಡಿದ ವಿದ್ಯಾರ್ಥಿನಿಯರು: ವೀಡಿಯೋ ವೈರಲ್

ಚೆನ್ನೈ: ತಮಿಳುನಾಡು ಸರ್ಕಾರದ ಶಾಲೆಯೊಂದರ ವಿದ್ಯಾರ್ಥಿನಿಯರು ಸಂಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಬಸ್ ನಲ್ಲೇ ಬಿಯರ್‌ ಕುಡಿದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಚೆಂಗಲ್ಪಟ್ಟು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಬಸ್ ನಲ್ಲಿಯೇ ಈ ರೀತಿಯಲ್ಲಿ ವರ್ತಿಸುತ್ತಿದ್ದರೆಂದು ಹೇಳಲಾಗುತ್ತಿದೆ. ಮಂಗಳವಾರ ತಿರುಕಝಕುಂದ್ರಂನಿಂದ ಥಾಚೂರಿಗೆ ತೆರಳುತ್ತಿದ್ದ ಬಸ್ ಹತ್ತಿರುವ ವಿದ್ಯಾರ್ಥಿನಿಯರು, ಬ್ಯಾಗಿನಿಂದ ಬಿಯರ್‌ ಬಾಟಲ್‌ ಒಂದನ್ನು ತೆಗೆದು ಕುಡಿಯಲಾರಂಭಿಸಿದ್ದಾರೆ. ಈ ದೃಶ್ಯವನ್ನು ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾನೆ.

ಮಂಗಳವಾರ ರಾತ್ರಿಯೇ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಮುಗಿದ ನಂತರ ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದು ಚೆಂಗಲ್ಪಟ್ಟು ಜಿಲ್ಲೆಯ ಶಿಕ್ಷಣಾಧಿಕಾರಿ ರೋಸ್‌ ನಿರ್ಮಲಾ ತಿಳಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100