ಹೊಸಪೇಟೆ : ಚಲಿಸುತ್ತಿದ್ದ ರೈಲಿನಿಂದ ಯುವಕ - ಯುವತಿ ಬಿದ್ದು ಸಾವು!

ವಿಜಯನಗರ: ಅಪರಿಚಿತ ಯುವಕ- ಯುವತಿಯು ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಹೊಸಪೇಟೆ ತಾಲೂಕಿನ ಕೊಟಗಿನಾಳ್ ಗ್ರಾಮದ ಬಳಿ ಶನಿವಾರ ನಡೆದಿದೆ.

50 ಅಡಿ ಅಂತರದಲ್ಲಿ ಯುವತಿ ಹಾಗೂ ಯುವಕನ ಮೃತದೇಹ ರೈಲ್ವೆ ಹಳಿ ಪಕ್ಕದಲ್ಲೇ ಬಿದ್ದಿದೆ. ಮೃತರ ಹೆಸರು, ವಿಳಾಸ ಯಾವುದೂ ಇನ್ನು ಪತ್ತೆಯಾಗಿಲ್ಲ. ಇಬ್ಬರೂ ಸುಮಾರು 21 ವರ್ಷ ವಯಸ್ಸಿನವರಾಗಿರಬಹುದು ಎಂದು ಶಂಕಿಸಲಾಗಿದೆ. ಇವರು ಬಳ್ಳಾರಿಯಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ರೈಲಿನಿಂದ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. 

ಇವರು ಚಲಿಸುತ್ತಿದ್ದ ರೈಲಿನ ಬಾಗಿಲಲ್ಲಿ ಕುಳಿತಿದ್ದು, ಅಕಸ್ಮಾತ್ತಾಗಿ ಕೆಳಗೆ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇಬ್ಬರ ಮೊಬೈಲ್ ಫೋನ್​ಗಳು ಸದ್ಯ ಸ್ವಿಚ್ ಆಫ್ ಆಗಿವೆ. ಸ್ಥಳಕ್ಕೆ ಬಳ್ಳಾರಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.