-->

ವೈದ್ಯ ಪತಿಯ ನಿಲ್ಲದ ಹಣದ ದಾಹ: ವರದಕ್ಷಿಣೆ ಕಿರುಕುಳಕ್ಕೆ ವೈದ್ಯೆ ಪತ್ನಿ ಆತ್ಮಹತ್ಯೆ

ವೈದ್ಯ ಪತಿಯ ನಿಲ್ಲದ ಹಣದ ದಾಹ: ವರದಕ್ಷಿಣೆ ಕಿರುಕುಳಕ್ಕೆ ವೈದ್ಯೆ ಪತ್ನಿ ಆತ್ಮಹತ್ಯೆ

ಹೈದರಾಬಾದ್: ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೆ ವೈದ್ಯೆ ಪತ್ನಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‌ನ ಮಲಕಪೇಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪತಿಯೂ ವೈದ್ಯೆ​, ಪತ್ನಿಯೂ ವೈದ್ಯೆ​. ಆದರೂ ಪತಿಯ ಹಣದ ದಾಹ ನಿಲ್ಲಲಿಲ್ಲ. ಪದೇಪದೇ ತವರಿನಿಂದ ಇನ್ನಷ್ಟು ಹಣ ತರುವಂತೆ ದಿನನಿತ್ಯ ಪೀಡಿಸುತ್ತಿದ್ದ‌ ಪತಿ. ಇದರಿಂದ ಬೇಸತ್ತು ಪತ್ನಿ ಡಾ.ಸಪ್ನಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು. 

ನಲ್ಗೊಂಡದ ದಾಮರಚಾರ್ಲವಾಸಿ ನಿವಾಸಿಯಾಗಿರುವ ಡಾ.ಸಪ್ನಾ ಮೊದಲ ಪತಿಗೆ ವಿಚ್ಛೇದನ ನೀಡಿದ್ದಾರೆ. ಆ ಬಳಿಕ 2015ರ ಎಪ್ರಿಲ್​ ತಿಂಗಳಲ್ಲಿ ಕರ್ನೂಲ್​​ನ ನಿವಾಸಿ ಉಸ್ಮಾನಿಯಾ ವೈದ್ಯಕೀಯ ಕಾಲೇಜ್​​ನಲ್ಲಿ ಎಂಡಿ ಡಾ.ಶ್ರೀಧರ್​​ ರೊಂದಿಗೆ ಎರಡನೇ ವಿವಾಹವಾಗಿದ್ದರು. ಡಾ.ಶ್ರೀಧರ್​ಗೂ ಇದು ಎರಡನೆಯ ಮದುವೆಯಾಗಿತ್ತು. 

ಮದುವೆಯ ಸಮಯದಲ್ಲಿ ಡಾ‌.ಸಪ್ನಾ ಮನೆಯವರು 10 ಲಕ್ಷ ರೂ. ನಗದು ಹಾಗೂ 14 ತೊಲ ಚಿನ್ನಾಭರಣ ನೀಡಿದ್ದರು. ಇಷ್ಟಾದರೂ ಆತನ ಹಣದ ದಾಹ ನಿಂತಿರಲಿಲ್ಲ. ಕಳೆದ ಒಂದು ವರ್ಷದಿಂದ ಪತ್ನಿಗೆ ವರದಕ್ಷಿಣೆ ವಿಚಾರವಾಗಿ ನಿತ್ಯ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದಿದ್ದ ಡಾ.ಸಪ್ನಾ ಈ ಮೊದಲೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಆಕೆಯ ಪಾಲಕರು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ಕೌನ್ಸೆಲಿಂಗ್​ ಮಾಡಿಸಿದ್ದರು. ತಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಲ್ಲಿ ದೂರು ಕೂಡ ನೀಡಿದ್ದರು. ಆದರೂ ಕಿರುಕುಳ ಮುಂದುವರೆದಿದ್ದರಿಂದ ಸ್ವಪ್ನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article