ಮಂಗಳೂರಿನಲ್ಲಿ ರಿಕ್ಷಾ ಹತ್ತಿದ ಯುವತಿಗೆ 'ನಿನ್ನ ಮೈಮಾಟ ಚೆನ್ನಾಗಿದೆ, ಫ್ರೆಂಡ್ಸ್ ಜೊತೆಗೆ ಮನೆಗೆ ಬರ್ಲಾ' ಎಂದ ರಿಕ್ಷಾ ಚಾಲಕ ಅಂದರ್!

ಮಂಗಳೂರು: ಯುವತಿಯೊಯೊಂದಿಗೆ ಅನುಚಿತವಾಗಿ ವರ್ತಿಸಿರುವ ಆಟೋ ಚಾಲಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಮುನ್ನೂರು ಗ್ರಾಮ ನಿವಾಸಿ ಆಟೋ ಚಾಲಕ ಸಮೀರ್(22) ಬಂಧಿತ ಆರೋಪಿ.

ಮಂಗಳೂರು ನಗರದ ಹೊರವಲಯದ ಉಳ್ಳಾಲದ ಮುನ್ನೂರಿನಲ್ಲಿ ಯುವತಿ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಸಂದರ್ಭ‌ ಆಟೊ ಚಾಲಕ ಸಮೀರ್ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆಕೆಯ ಮೈ ಮೇಲೆ ಕೈ ಹಾಕಿ, ಅಸಭ್ಯವಾಗಿ 'ನಿನ್ನ ಮೈಮಾಟ ಚೆನ್ನಾಗಿದೆ, ಫ್ರೆಂಡ್ಸ್ ಜೊತೆಗೆ ಮನೆಗೆ ಬರ್ಲಾ' ಎಂದು ಕೇಳಿದ್ದಾನೆ. 

ಇದರಿಂದ ಬೆದರಿದ ಯುವತಿ ಮನೆಗೆ ಬಂದು ಪುತ್ರನಿಗೆ ಹಾಗೂ ಅಕ್ಕಪಕ್ಕದ ಮನೆಯವರಲ್ಲಿ ಈ ವಿಚಾರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯ ಮನೆಯವರು ಹಾಗೂ ಅಕ್ಲಪಕ್ಕದವರು ಆಟೊ ಚಾಲಕ ಸಮೀರ್ ನನ್ನು ಈ ಬಗ್ಗೆ ವಿಚಾರಿಸಿದ್ದಾರೆ. ಆಗ ಆತ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ಆತನ ಅಣ್ಣ ರಮೀಝ್ ಕೂಡಾ ಬೈದು ಬೆದರಿಕೆ ಒಡ್ಡಿದ್ದಾನೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಯುವತಿ ನೀಡಿರುವ ದೂರಿನ ಹಿನ್ನಲೆಯಲ್ಲಿ ಆಟೋ ಚಾಲಕ ಸಮೀರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu