-->
ವಿವಾಹವಾಗುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ: ಸ್ಯಾಂಡಲ್ ವುಡ್ ಪ್ರಸಿದ್ಧ ನಟಿಯ ಸಹೋದರನ ವಿರುದ್ಧ ದೂರು ದಾಖಲು

ವಿವಾಹವಾಗುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ: ಸ್ಯಾಂಡಲ್ ವುಡ್ ಪ್ರಸಿದ್ಧ ನಟಿಯ ಸಹೋದರನ ವಿರುದ್ಧ ದೂರು ದಾಖಲು

ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಸ್ಯಾಂಡಲ್​ವುಡ್ ನಟಿಯ ಸಹೋದರನ ವಿರುದ್ಧ ಪ್ರಕರಣ​ ದಾಖಲಾಗಿದೆ. 

ಸ್ಯಾಂಡಲ್ ವುಡ್ ನ ಪ್ರಸಿದ್ಧ ನಟಿಯ ಸಹೋದರ ಕೀರ್ತಿಚಂದ್ರ ಎಂಬಾತನ‌ ವಿರುದ್ಧ ಯುವತಿ ಅತ್ಯಾಚಾರಗೈದ ದೂರು ನೀಡಿದ್ದಾಳೆ. ಇದೀಗ ಆತನ ವಿರುದ್ಧ ಬೆಂಗಳೂರಿನ ಬಸವನಗುಡಿ‌ ಮಹಿಳಾ‌ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಶಾದಿ ಡಾಟ್​ ಕಾಮ್​ ಮೂಲಕ 2021ರ ಮೇಯಲ್ಲಿ ಕೀರ್ತಿಚಂದ್ರನಿಗೆ ಯುವತಿ ಪರಿಚಯವಾಗಿತ್ತು. ಬಳಿಕ ಪರಸ್ಪರ ಇಬ್ಬರೂ ಮೊಬೈಲ್​ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಆಗ ಕೀರ್ತಿಚಂದ್ರ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಇದಾದ ಬಳಿಕ ಕೀರ್ತಿಚಂದ್ರನ ಹುಟ್ಟುಹಬ್ಬಕ್ಕೆ ಯುವತಿ ಐ ಫೋನ್ ಅನ್ನು ಗಿಫ್ಟ್ ನೀಡಿದ್ದಳು. ಬಳಿಕ ಲ್ಯಾಪ್​ಟಾಪ್​ ಹಾಗೂ ಆ್ಯಪಲ್ ವಾಚ್ ಕೂಡ ಉಡುಗೊರೆ ನೀಡಿದ್ದಳು. 

ಆ ಬಳಿಕ ಖಾಸಗಿ ಹೋಟೆಲ್ ಒಂದಕ್ಕೆ ಕರೆಸಿಕೊಂಡಿದ್ದ ಕೀರ್ತಿಚಂದ್ರ ಅಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದ. ಆ ಬಳಿಕದಿಂದ ಆತ ಸಂಪರ್ಕಕ್ಕೆ ಸಿಗದೆ  ತಲೆಮರೆಸಿಕೊಂಡಿರುವುದಾಗಿ ದೂರಿರುವ ಯುವತಿ, ಅತ್ಯಾಚಾರದ ದೂರು​ ದಾಖಲಿಸಿದ್ದಾಳೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article