
ಪಾರ್ಟಿ ಮುಗಿಸಿ ಗೆಳೆಯರೊಂದಿಗೆ ಬಂದ ಯುವತಿಗೆ ಕ್ಯಾಬ್ ಚಾಲಕ ಮಾಡಿದ್ದೇನು ಗೊತ್ತೇ?
Thursday, March 10, 2022
ಬೆಂಗಳೂರು: ಯುವತಿಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿರುವ ಆರೋಪದಲ್ಲಿ ಕ್ಯಾಬ್ ಚಾಲಕನನ್ನು ಜೀವನ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 9ರಂದು ತಡರಾತ್ರಿ 1 - 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಕಾಕೋಳು ಮೂಲದ ಕ್ಯಾಬ್ ಚಾಲಕ ಮಂಜುನಾಥ್ ಬಂಧಿತ ಆರೋಪಿ. ನಿನ್ನೆ ತಡರಾತ್ರಿ ಸಂತ್ರಸ್ತ ಯುವತಿ ಹಾಗೂ ಆಕೆಯ ಗೆಳೆಯರಿಬ್ಬರು ಪಾರ್ಟಿ ಮುಗಿಸಿ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಾರೆ. ಕ್ಯಾಬ್ನಿಂದ ಇಳಿಯುವ ಸಂದರ್ಭ ಯುವತಿ ಚಾಲಕನ ಸಹಾಯ ಕೇಳಿದ್ದಾಳೆ.
ಆದರೆ ಈ ಸಂದರ್ಭ ಚಾಲಕ ಆಕೆಯ ಖಾಸಗಿ ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಆರೋಪಿಸಿ ಯುವತಿ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಬುಧವಾರ ರಾತ್ರೋರಾತ್ರಿ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.