ಹೇಗರಿವೇ?: ಸುಜನ್ ಶೆಟ್ಟಿ ನೂತನ ಆಲ್ಬಮ್ ಬಿಡುಗಡೆ
ಉದಯೋನ್ಮುಖ ಯುವ ಕಲಾವಿದ ಸುಜನ್ ಶೆಟ್ಟಿ ಅವರ ನೂತನ ಆಲ್ಬಂ 'ಹೇಗರಿವೇ..?' ಬಿಡುಗಡೆಯಾಗಿದೆ. ಇದು ಅವರ ಎರಡನೇ ಆಲ್ಬಂ ಆಗಿದೆ.
ಸ್ವರಾಸ್ತ್ರ ಪ್ರಾಯೋಜಿಸಿರುವ ಈ ಆಲ್ಬಂಗೆ ಸಂಗೀತ ನೀಡಿದವರು ಮನ್ವಿತ್ ಕರ್ಕೇರ. ಸಾಹಿತ್ಯ ರಚಿಸಿ ಹಾಡಿದವರು ಸುಜನ್ ಶೆಟ್ಟಿ.
ಸುಜನ್ ಶೆಟ್ಟಿ ಅವರ ಮೊದಲನೇ ಮ್ಯೂಸಿಕ್ ಆಲ್ಬಂ 'ಅತಿಶಯ' ವ್ಯಾಪಕ ಜನಮನ್ನಣೆ ಮತ್ತು ಪ್ರಶಂಸೆ ಪಡೆದಿತ್ತು.
ಇದೀಗ ಒಂದು ವರ್ಷದ ಬಳಿಕ ಸುಜನ್ ತಮ್ಮ ಎರಡನೇ ಪ್ರಯತ್ನ ನಡೆಸಿದ್ದು, ಇದಕ್ಕೂ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.