ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿ ತಾನೂ ಕತ್ತು ಕೊಯ್ದುಕೊಂಡ ಪತಿ!

ಆನೇಕಲ್: ಮಲಗಿದ್ದ ಪತ್ನಿಯ ಕತ್ತು ಕೊಯ್ದು ಕೊಲೆಗೈದ ಪತಿ ಬಳಿಕ ತಾನೂ ಕತ್ತು ಕಾಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ಸಂಭವಿಸಿದೆ. ಈ ಭೀಕರ ಘಟನೆ ಇಂದು  ಬೆಳ್ಳಂಬೆಳಗ್ಗೆ ನಡೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಾರೆ. 

ಲಾವಣ್ಯ(30) ಕೊಲೆಯಾದ ದುರ್ದೈವಿ. ಹತ್ಯೆ ಮಾಡಿ ಕತ್ತು ಕೊಯ್ದುಕೊಂಡ ಸಂಪತ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

12 ವರ್ಷಗಳ ಹಿಂದೆ ಲಾವಣ್ಯ ಹಾಗೂ ಸಂಪತ್​ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ 10 ದಿನಗಳಿಂದ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು. ರವಿವಾರ ಲಾವಣ್ಯ ಮನೆಯವರು ಬಂದು ಪಂಚಾಯತಿಗೆ ಮಾಡಿ ಇಬ್ಬರಿಗೂ ಬುದ್ಧಿವಾದ ಹೇಳಿ ಹೋಗಿದ್ದರು. ಅದರ ಮರುದಿನ ಬೆಳ್ಳಂಬೆಳಗ್ಗೆಯೇ ಸಂಪತ್​, ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಅಡ್ಡ ಬಂದ ಪುತ್ರ ಭಾರ್ಗವ್​ನ ಕೈ ಕೊಯ್ದು ಬಳಿಕ ತನ್ನ ಕತ್ತನ್ನೂ ಕೊಯ್ದುಕೊಂಡು ನೋವಿನಿಂದ ಚೀರಾಡುತ್ತಾ ಮೊದಲ ಮಹಡಿ ಮನೆಯಿಂದ ಕೆಳಗೆ ಓಡಿಕೊಂಡು ಬಂದು ಚರಂಡಿಗೆ ಬಿದ್ದಿದ್ದಾನೆ.

ಸಂಪತ್ ​ನ ಚೀರಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಆತನ ಸ್ಥಿತಿ ನೋಡಿ ಬೆಚ್ಚಿಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಸಂಪತ್ ಹಾಗೂ ಪುತ್ರ ಭಾರ್ಗವ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆಯೊಳಗೆ ರಕ್ತದದ ಮಡುವಿನಲ್ಲಿ ಲಾವಣ್ಯಳ ಶವ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ. ಕುಡಿತ ಚಟ ಹೊಂದಿದ್ದ ಸಂಪತ್ ಮನೆಯಲ್ಲಿ ಪದೇಪದೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu