-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
job in Fisheries College - ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಉದ್ಯೋಗಾವಕಾಶ: ಸಂಪೂರ್ಣ ಮಾಹಿತಿ ಇಲ್ಲಿದೆ...

job in Fisheries College - ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಉದ್ಯೋಗಾವಕಾಶ: ಸಂಪೂರ್ಣ ಮಾಹಿತಿ ಇಲ್ಲಿದೆ...

ಮಂಗಳೂರು  ಮೀನುಗಾರಿಕಾ ಕಾಲೇಜಿನಲ್ಲಿ ಉದ್ಯೋಗಾವಕಾಶ: ಸಂಪೂರ್ಣ ಮಾಹಿತಿ ಇಲ್ಲಿದೆ...





ಮೀನುಗಾರಿಕಾ ಕಾಲೇಜಿನಲ್ಲಿ ಉದ್ಯೋಗಾವಕಾಶ.... 'ಸಾಗರ ಮಿತ್ರ' ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನ..



ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯ ಇದರ ವಿಷಯ ವಿಭಾಗದ ಡೀನ್ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮೀನುಗಾರಿಕಾ ಕಾಲೇಜಿನಲ್ಲಿ ಉದ್ಯೋಗ ಅವಕಾಶ ಆರಂಭವಾಗಿದೆ ಎಂದು ಹೇಳಿದ್ದಾರೆ.



ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಗುತ್ತಿಗೆ ಒಪ್ಪಂದದ ಆಧಾರದ ಮೇಲೆ 93 ಸಾಗರ ಮಿತ್ರ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.



ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ (2), ಉಡುಪಿ (43) ಹಾಗೂ ಉತ್ತರ ಕನ್ನಡ ಜಿಲ್ಲೆಗಳ (48) ಆಯ್ದ ಗ್ರಾಮಗಳಿಗೆ ಗುತ್ತಿಗೆ/ಒಪ್ಪಂದದ ಆಧಾರದ ಮೇಲೆ ಸಾಗರ ಮಿತ್ರರನ್ನು ಒಂಭತ್ತು ತಿಂಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. 


ಈ ಸಂಬಂಧ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು aaofishcol@gmail.com ಮುಖಾಂತರ / ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25.03.2022.


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಮೀನುಗಾರಿಕಾ ಮಹಾವಿದ್ಯಾಲಯದ ಅಧಿಕೃತ ವೆಬ್‍ಸೈಟ್


www.cofm.edu.in ನಲ್ಲಿ ಪಡೆದು ಕೊಳ್ಳಬಹುದು. ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.


ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.

1. ದಿನಾಂಕ: 04-04-2022 ರಂದು ಬೆಳಿಗ್ಗೆ 10 ಗಂಟೆಯ ನಂತರ ಡೀನ್ ಮೀನುಗಾರಿಕಾ ಮಹಾವಿದ್ಯಾಲಯ,

ಮಂಗಳೂರಿನಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುವುದು.



ಹೆಚ್ಚಿನ ಮಾಹಿತಿಯನ್ನು ಮೀನುಗಾರಿಕಾ ಮಹಾವಿದ್ಯಾಲಯದ ಅಧಿಕೃತ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದು ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಹೊರಡಿಸಿರುವ ಪ್ರಕಟಣೆ ತಿಳಿಸಿದೆ.


ವೆಬ್‌ಸೈಟ್ ವಿವರ: www.cofm.edu.in


ನೋಟಿಫಿಕೇಶನ್‌ಗೆ: https://www.cofm.edu.in/notifications.html




ಷರತ್ತು ಮತ್ತು ನಿಬಂಧನೆಗಳು

1. ಸಂದರ್ಶನವನ್ನು ಖುದ್ದಾಗಿ / ಆನ್ ಲೈನ್ ಮುಖಾಂತರ ನಡೆಸಲಾಗುವುದು.


2. ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗತಕ್ಕದು. ಪ್ರವಾಸ ಭತ್ಯೆ ಹಾಗೂ ಇನ್ನಿತರ ಯಾವುದೇ ಭತ್ಯೆಗೆ ಅರ್ಹರಾಗಿರುವುದಿಲ್ಲ.


3. ಮೇಲೆ ತಿಳಿಸಿದ ಹುದ್ದೆಗಳು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಆಗಿರುತ್ತದೆ. ಸಂಬಂಧ ಪಟ್ಟಂತೆ ಖಾಯಂ ಮತ್ತು ಹಿರಿತನ ಅರ್ಹತೆಗೆ ಪರಿಗಣಿಸಲಾಗುವುದಿಲ್ಲ.



4. ಗುತ್ತಿಗೆ ಆಧಾರದ ಮೇಲೆ ನೇಮಕಾತಿ... ಯಾವುದೇ ಪೂರ್ವ ಮಾಹಿತಿ ನೀಡದೆ ಗುತ್ತಿಗೆ ಅವಧಿ ರದ್ದುಪಡಿಸುವ ಹಾಗೂ ವಜಾಗೊಳಿಸುವ ಹಕ್ಕು ನೇಮಕಾತಿ ಪ್ರಾಧಿಕಾರಕ್ಕೆ ಇರುತ್ತದೆ.


5. ಅದಾಗಿ, ನೇಮಕಾತಿ ಹೊಂದಿದ ಅಭ್ಯರ್ಥಿಗಳನ್ನು ಅಗತ್ಯಕ್ಕೆ ತಕ್ಕಂತೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ನಿಗದಿಪಡಿಸಿದ ಕೆಲಸವನ್ನು ನಿಯೋಜಿಸಲು ಸಂಪೂರ್ಣ ಹಕ್ಕನ್ನು ಹೊಂದಿರುತ್ತಾರೆ.


6. ಸಾಗರ ಮಿತ್ರರನ್ನು ಆಯ್ಕೆ ಮಾಡುವಾಗ ಕರ್ನಾಟಕ ಸರ್ಕಾರ ನಿಗದಿ ಪಡಿಸಿರುವ ರೋಸ್ಟರ್ ಪದ್ದತಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುವುದು.


7. ಆಯ್ಕೆಯಾದ ಸಾಗರ ಮಿತ್ರರು ಆಯಾ ಜಿಲ್ಲೆಗಳಲ್ಲಿ ನೇಮಿಸಿರುವ ಮೀನುಗಾರಿಕಾ ಅಧಿಕಾರಿಗಳಿಗೆ ವರದಿ ಮಾಡಿಕೊಳ್ಳಬೇಕು


8. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಆಯ್ಕೆಯಾದ ಸಾಗರ ಮಿತ್ರರಿಗೆ ಈ ಯೋಜನೆ ಪೂರ್ಣಗೊಂಡ ನಂತರ ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಧನವನ್ನು ಕೊಡಲಾಗುವುದಿಲ್ಲ.  


9. ಸಾಗರ ಮಿತ್ರರು ತಾವು ನೇಮಕ ಹೊಂದಿರುವ ಗ್ರಾಮದಲ್ಲೇ ವಾಸವಾಗಿರಬೇಕು.


10. ಅಭ್ಯರ್ಥಿಗಳು ಸಂದರ್ಶನದ ವೇಳೆ ಅವರ ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ಜಾತಿ ಪ್ರಮಾಣಪತ್ರ ಹಾಗೂ ಅನುಭವದ ಪ್ರಮಾಣ ಪತ್ರಗಳ ಮೂಲ ಪ್ರತಿಯನ್ನು ತೋರಿಸಬೇಕು.



ಸಾಗರ ಮಿತ್ರ ಕೆಲಸದ ಮೂಲ ಉದ್ದೇಶಗಳು

1. ಸಾಗರ ಮಿತ್ರರು ಮೀನುಗಾರರ ಯಾವುದೇ ಬೇಡಿಕೆ ಹಾಗೂ ಸೇವೆಗಳಿಗೆ ಸ್ಪಂದಿಸುವ ಮೊದಲನೇ ವ್ಯಕ್ತಿಯಾಗಿರಬೇಕು.


2. ಸ್ಥಳೀಯ ಮೀನುಗಾರರಿಗೆ ಬೇರೆ ಬೇರೆ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು ಮತ್ತು ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದರ ಬಗ್ಗೆ ಮಾಹಿತಿ ಕೊಡಬೇಕು.

 

3. ಮೀನುಗಾರರಿಗೆ ಹವಾಮಾನ ಮುನ್ಸೂಚನೆ ಹಾಗೂ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ ಕೊಡಬೇಕು.


4. ಮೀನುಗಾರರಿಗೆ ತಾಜ ಮೀನುಗಳ ಸ್ವಚ್ಚತೆ, ವ್ಯೆಯ್ಯಕ್ತಿಕ ಸ್ವಚ್ಚತೆ, ಆರೋಗ್ಯಕರವಾದ ವಾತಾವರಣ ನಿರ್ವಹಣೆ ಹಾಗೂ ಆರೋಗ್ಯಕರವಾಗಿ ಬದುಕುವುದರ ಬಗ್ಗೆ ತಿಳುವಳಿಕೆ ಮೂಡಿಸಬೇಕು.


5. ಮೀನುಗಾರರಿಗೆ ಮತ್ಸ್ಯ ಸಂಪನ್ಮೂಲವನ್ನು ವ್ಯವಸ್ಥಿತವಾಗಿ ಸಂರಕ್ಷಿಸುವುದು, ಉಪಯೋಗಿಸುವುದು, ಸಮುದ್ರಗಳ ಪ್ರಾಮುಖ್ಯತೆ, ಕರಾವಳಿಯ ಪರಿಸರದ ಸಂರಕ್ಷಣೆ, ಕಾನೂನುಬಾಹಿರವಾದ, ಜವಾಬ್ದಾರಿಯುತ ಮೀನುಗಾರಿಕೆಯಲ್ಲಿ ನೀತಿ ಸಂಹಿತೆ, ವರದಿ ಮಾಡದ ಹಾಗೂ ಅಕ್ರಮ ಮೀನುಗಾರಿಕೆಯನ್ನು ತಡೆಯುವ ಬಗ್ಗೆಯೂ ಸಹ ತಿಳುವಳಿಕೆ ಮೂಡಿಸಬೇಕು.


6. ಮಹಿಳೆಯರ ಆರ್ಥಿಕತೆಯನ್ನು ಬೇರೆಬೇರೆ ಉಪ ಜೀವನೋಪಾಯದಿಂದ, ಮೀನಿನ ಸಂಸ್ಕರಣೆ ಹಾಗೂ ಮೀನು ಮಾರಾಟದ ಚಟುವಟಿಕೆಗಳಿಂದ ಅಭಿವೃದ್ಧಿ ಪಡಿಸುವುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು ಹಾಗೂ ಮೀನುಗಾರ ಮಹಿಳೆಯರಿಗೆ ಈ ವಿಷಯದಲ್ಲಿ ತರಬೇತಿ ನೀಡಬೇಕು.



7. ಮೀನುಗಾರಿಕೆಗೆ ಹೊರ ಹೋಗುವ, ಒಳಬರುವ ದೋಣಿಗಳ, ಮೀನಿನ ಉತ್ಪಾದನೆ, ಎಷ್ಟು ಮೀನು ದೊರೆತಿದೆ, ಅವುಗಳ ಬೆಲೆ ಹಾಗೂ ಅವುಗಳ ಮಾರಾಟದ ವಿವರವನ್ನು ಸಂಗ್ರಹಿಸಿ ಪ್ರತಿನಿತ್ಯವೂ ಸರ್ಕಾರಕ್ಕೆ ಮೀನುಗಾರಿಕಾ ಇಲಾಖೆಯ ಮುಖಾಂತರ ವರದಿ ಸಲ್ಲಿಸಬೇಕು.



ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯ ಅಡಿಯಲ್ಲಿ ಸಾಗರ ಮಿತ್ರರನ್ನು ಆಯ್ಕೆ ಮಾಡುವ ವಿಧಾನಗಳು:

1. ನೇಮಕಾತಿಯಾದ ಅಭ್ಯರ್ಥಿಗೆ ತಿಂಗಳಿಗೆ ರೂ.15,000/- ಸಂಭಾವನೆ ಕೊಡಲಾಗುತ್ತದೆ.


2. ಅಭ್ಯರ್ಥಿಯನ್ನು ಗ್ರಾಮಕ್ಕೆ ಒಬ್ಬರಂತೆ ನೇಮಿಸಲಾಗುತ್ತದೆ.


3. ಅಭ್ಯರ್ಥಿಯು ಮೀನುಗಾರಿಕೆ ವಿಜ್ಞಾನ/ಕಡಲಿನ ಜೀವಶಾಸ್ತ್ರ/ಪ್ರಾಣಿಶಾಸ್ತ್ರ/BSc/ಪದವಿ/PUC

ತೇರ್ಗಡೆಯಾಗಿರಬೇಕು. ಮೀನುಗಾರಿಕೆ ವಿಜ್ಞಾನದಲ್ಲಿ ಪದವಿ/BSc ಪದವಿ ಪಡೆದವರಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ.


4. ಅಭ್ಯರ್ಥಿಯು ಸ್ಥಳೀಯರಾಗಿದ್ದರೆ ಹೆಚ್ಚಿನ ಆದ್ಯತೆ


5. ವಯಸ್ಸು 35 ವರ್ಷಕ್ಕಿಂತ ಹೆಚ್ಚಿರಬಾರದು.


6. ಅಭ್ಯರ್ಥಿಯು ಸ್ಥಳೀಯ ಭಾಷೆಯಲ್ಲಿ ಪರಿಣಾಮಕಾರಿಯಾಗಿ ವ್ಯವಹರಿಸುವಂತೆ ಇರಬೇಕು.


7. ಜನರನ್ನು ಒಗ್ಗೂಡಿಸುವ ಹಾಗೂ ಮೀನುಗಾರರನ್ನು ಹುರಿದುಂಬಿಸುವ ಚತುರತೆ ಇರಬೇಕು.


8. ಕೆಲಸದ ಬಗ್ಗೆ ಬದ್ದತೆ ಇದ್ದು ಮೀನುಗಾರರಲ್ಲಿ ಬದಲಾವಣೆ ತರುವಂತಿರಬೇಕು.



Ads on article

Advertise in articles 1

advertising articles 2

Advertise under the article

ಸುರ