ಕಾಪುವಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ: ಇಬ್ಬರು ಸಜೀವ ದಹನ, ಮೂವರಿಗೆ ಗಂಭೀರ ಗಾಯ

ಉಡುಪಿ: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಸಜೀವ ದಹನವಾಗಿರುವ ದುರ್ಘಟನೆಯೊಂದು ಇಂದು ಬೆಳಗ್ಗೆ ಕಾಪು ಮುಲ್ಲಾರು ಬಳಿ ಸಂಭವಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ರಜಾಕ್ ಹಾಗೂ ರಜಬ್ ಮೃತಪಟ್ಟ ದುರ್ದೈವಿಗಳು. ಅಲ್ಲದೆ ಗುಜರಿ ಅಂಗಡಿಯಲ್ಲಿದ್ದ ಮೂವರು ಪಾಲುದಾರರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಸ್ಫೋಟದ ತೀವ್ರತೆಗೆ ಫ್ರಿಜ್ ಸಹಿತ ಗುಜರಿ ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ.‌ ಬೆಂಕಿಯ ಕೆನ್ನಾಲಿಗೆ ಹಾಗೂ ದಟ್ಟ ಹೊಗೆಯು ಮುಗಿಲೆತ್ತರಕ್ಕೆ ಆವರಿಸಿ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಉಡುಪಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.